ಬೆಂಗಳೂರು : ಪಿಎಫ್ ಐ ಬ್ಯಾನ್ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಮಾದ್ಯಮಗಳಿ ಪ್ರತಿಕ್ರಿತರ ನೀಡಿದ್ದು, ಇದೇ ತಿಂಗಳು 22 ರಂದು ಎನ್.ಐ.ಎ ನಮ್ಮ ರಾಜ್ಯಕ್ಕೆ ಬಂದು ದಾಳಿಮಾಡಿದ್ರು. ಖಚಿತ ಮಾಹಿತಿ ಮೇರೆಗೆ ಪ್ರಿವೆಂಟಿವ್ ಡಿಟೆಂಷನ್ ಮೇಲೆ 101 ಜನರನ್ನ ವಶಕ್ಕೆ ಪಡೆದಿದ್ದೇವೆ. ಜೊತೆಗೆ ಎನ್.ಐ.ಎ 7 ಆರೋಪಿಗಳನ್ನ ಹಾಗೂ ನಮ್ಮ ಪೊಲೀಸ್ರು 15 ಮಂದಿಯನ್ನ ಅರೆಸ್ಟ್ ಮಾಡಿದ್ದಾರೆ.
ಬಂಧಿತರ ವಿಚಾರಣೆ ವೇಳೆ ಕೆಲ ವಸ್ತುಗಳು ಸಿಕ್ಕಿವೆ ನೆನ್ನೆ ರಾತ್ರಿ ಗವರ್ನಮೆಂಟ್ ಆಫ್ ಇಂಡಿಯಾ ಪಿ.ಎಫ್.ಐ ಸಂಘಟನೆ UAPA ಕಾಯ್ದೆ ಅಡಿ ಬ್ಯಾನ್ ಮಾಡಿ ಆದೇಶ ಹೊರಡಿಸಿದೆ. ಬಂಧಿತರನ್ನ ತಹಶೀಲ್ದಾರ್ ಮುಂದೆ ಹಾಜರು ಪಡಿಸಿದ್ದಾರೆ.ಕೇಂದ್ರ ಸರ್ಕಾರದಿಂದ ಪಿಎಫ್ ಐ ಸೇರಿಸಂತೆ ಅಂಗ ಸಂಸ್ಥೆಗಳು ಬ್ಯಾನ್ ಆಗಿವೆ.ಡಿಜಿಸ್ಟ್ರಿಕ್ ಮ್ಯಾಜಿಸ್ಟ್ರೇಟ್ ಮತ್ತು ಕಮಿಷನರ್ ವ್ಯಾಪ್ತಿಯಲ್ಲಿ ಆರ್ಗನೈಜೇಷನ್ ಬ್ಯಾನ್ ಬಗ್ಗೆ ಕ್ರಮ ಆಗತ್ತೆ.ಪಿ.ಎಫ್.ಐ ಬ್ಯಾನ್ ಬಗ್ಗೆ ನಮಗೆ ಯಾವುದೇ ಮಾಹಿತಿ ಇರಲಿಲ್ಲ.
ಕೇಂದ್ರ ಸರ್ಕಾರಕ್ಕೆ ಬ್ಯಾನ್ ಮಾಡಿದ್ದಾರೆ.ಪಿ.ಎಫ್.ಐ ಸೇರಿ ಬ್ಯಾನ್ ಆಗಿರುವ ಆರ್ಗನೈಜೇಷನ್ ವಿರುದ್ದ ಕ್ರಮ ತೆಗೆದುಕೊಳ್ತಿವಿ.ಬ್ಯಾನ್ ಆಗಿರುವ ಆರ್ಗನೈಜೇಷನ್ ಪರವಾಗಿ ಯಾರಾದ್ರು ಪ್ರತಿಭಟನೆ ಮಾಡಿದ್ರೆ ದುಷ್ಪರಿಣಾಮ ಆಗತ್ತೆ. ಪ್ರತಿಭಟನೆ ಮಾಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಆಗುತ್ತೆ.ಸದ್ಯ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ.ಕೇಂದ್ರ ಸರ್ಕಾರದ ನಿರ್ಧಾರ ಪಾಲಿಸ್ತೇವೆ. ಕಳೆದೆರಡು ದಿನಗಳಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದೇವೆ.
PublicNext
28/09/2022 01:02 pm