ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಾರ್ಡ್ ಮೀಸಲಾತಿ ಕರಡು ಆದೇಶ ಆಕ್ಷೇಪಿಸಿ ಸಾವಿರಾರು ಅರ್ಜಿ: ಇಂದು ಆಕ್ಷೇಪಣೆ ಸಲ್ಲಿಸಲು ಲಾಸ್ಟ್ ಡೇಟ್....

ಬೆಂಗಳೂರು : ಪಾಲಿಕೆ ವಾರ್ಡ್ ಮೀಸಲಾತಿ ಪಟ್ಟಿಯ ಕರಡು ಪ್ರತಿಯ ಸಂಬಂಧ ಸಾವಿರಾರು ಆಕ್ಷೇಪಣೆಗಳು ಹರಿದು ಬರುತ್ತಿವೆ. ಕಾಂಗ್ರೆಸ್ ಜನಪ್ರತಿನಿಧಿಗಳು ಇರುವ ಕ್ಷೇತ್ರಗಳಲ್ಲೇ ಹೆಚ್ಚು ಆಕ್ಷೇಪಣೆ ಅರ್ಜಿ ಸಲ್ಲಿಕೆಯಾಗಿವೆ ಎಂದು ತಿಳಿದು ಬಂದಿದೆ.ನಗರಾಭಿವೃದ್ಧಿ ಇಲಾಖೆಗೆ 2000ಕ್ಕೂ ಹೆಚ್ಚು ಆಕ್ಷೇಪಣಾ ಅರ್ಜಿಗಳು ಬಂದಿವೆ. ವಾರದ ಕೆಳಗೆ 243 ವಾರ್ಡ್ಗಳಿಗೆ ಮೀಸಲು ನಿಗದಿ ಮಾಡಿದ್ದ ಸರ್ಕಾರ ಆಕ್ಷೇಪಣೆ ಸಲ್ಲಿಸಲು ಇಂದು ಕೊನೆಯ ದಿನ ಎಂದು ಹೇಳಿತ್ತು.

ಕಾಂಗ್ರೆಸ್, ಜೆಡಿಎಸ್ ಕ್ಷೇತ್ರಗಳಲ್ಲಿ ಹೆಚ್ಚು ಮಹಿಳಾ ಮೀಸಲು ನಿಗದಿಯಾಗಿಡೆ. ಒಂದೊಂದು ವಿಧಾನಸಭಾ ಕ್ಷೇತ್ರದಲ್ಲಿ 7 ರಿಂದ 9 ವವಾರ್ಡ್ ಗಳು ಎಂದು ವಿಂಗಡನೆ ಮಾಡಲಾಗಿದೆ. ಬಿಜೆಪಿ ದುರುದ್ದೇಶದಿಂದ ಮೀಸಲು ವಿಚಾರದಲ್ಲಿ ಅನ್ಯಾಯ ಮಾಡಿದೆ ಎಂದು ಆರೋಪ ಮಾಡಲಾಗಿದೆ.

ಪುಲಿಕೇಶಿನಗರದಲ್ಲಿ ಒಂದೇ ಒಂದು ವಾರ್ಡ್ಗೆ ಸಾಮಾನ್ಯ ಮೀಸಲು, ಪುಲಕೇಶಿ ನಗರದಲ್ಲಿ ಎರಡು ವಾರ್ಡ್ ರೊಟೇಷನ್ ಮಾಡಿಲ್ಲ. ಮರು ಪರಿಷ್ಕರಣೆ ಮಾಡುವಂತೆ ಇಲಾಖೆಗೆ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಇದು 2020 ರ ಬಿಬಿಎಂಪಿ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಕಾಂಗ್ರೆಸ್ ನಾಯಕರುಗಳು ಆರೋಪಿಸುತ್ತಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

10/08/2022 09:54 pm

Cinque Terre

1.24 K

Cinque Terre

0

ಸಂಬಂಧಿತ ಸುದ್ದಿ