ವರದಿ-- ಪ್ರವೀಣ ನಾರಾಯಣ ರಾವ್
ಬೆಂಗಳೂರು: ಹಲವು ದಿನಗಳಿಂದ ಮೌನಕ್ಕೆ ಶರಣಾಗಿದ್ದ ರಾಜಾಹುಲಿ ಬಿಎಸ್ ಯಡಿಯೂರಪ್ಪ ನವರು ಮೌನ ಮುರಿಯುವ ಕಾಲ ಸನ್ನಿಹಿತವಾದಂತಿದೆ..
ಬಿಜೆಪಿ ಯಲ್ಲಿ ಬಿಎಸ್ ವೈ ಅವರನ್ನ ಕಡೆಗಣನೆ ಮಾಡುತ್ತಿದ್ದಾರೆ ಎಂಬ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬಿ ಎಸ್ ವೈ ಮತ್ತೆ ಆ್ಯಕ್ಟಿವ್ ಆಗಿದ್ದಾರೆ.
ಕಳೆದವಾರ ಬಿಜೆಪಿ ಚಿಂತನ ಸಭೆಯಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪನವರು ಇದೇ ಜುಲೈ 21 ರಿಂದ ಕೆ ಆರ್ ಪೇಟೆಯಿಂದ ರಥಯಾತ್ರೆ ಹೊರಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ..
ರಥಯಾತ್ರೆಯ ಮೂಲಕ ಇಡೀ ರಾಜ್ಯ ಪ್ರವಾಸ ಮಾಡಿ ಪಕ್ಷಕ್ಕೆ 140 ಸ್ಥಾನಗಳನ್ನು ತಂದು ಕೊಡುತ್ತೇನೆ ಅನ್ನುವ ಮಾತು ಹೇಳಿದ್ದಾರೆ..
ಬಿಎಸ್ ವೈ ಅವರ ಈ ಏಕಾಂಗಿ ಯಾತ್ರೆ ಬಿಜೆಪಿ ಪಾಲಿಗೆ ಒಂದು ರೀತಿಯ ತಲೆನೋವಾಗಿ ಪರಿಣಮಿಸಿದೆ..
ರಥಯಾತ್ರೆ ನಡೆದರೆ ಪರಿಣಾಮ ಏನಾಗಬಹುದು ಎಂಬುದರ ಕುರಿತಾಗಿನ ವಿಶ್ಲೇಷಣೆ ಇಲ್ಲಿದೆ..
PublicNext
19/07/2022 08:13 pm