ವರದಿ- ಗಣೇಶ್ ಹೆಗಡೆ
ಬೆಂಗಳೂರು: ಪ್ರಧಾನ ಮಂತ್ರಿ ಕಿಸಾ ನ್ ಸಮ್ಮಾನ್ ಯೋಜನೆಯ ವೆಬ್ ಸೈಟ್ ನಲ್ಲಿ ಮಾಯವಾಗಿದ್ದ ಕನ್ನಡ ಭಾಷೆ ಪ್ರತ್ಯಕ್ಷವಾಗಿದೆ. ಹಿಂದಿ, ಗುಜರಾತಿ, ತಮಿಳು, ತೆಲಗು ಸೇರಿದಂತೆ ಹಲವು ಭಾರತೀಯ ಭಾಷೆಗಳು ಇದ್ದರೂ ಕನ್ನಡ ಮಾತ್ರ ಇರಲಿಲ್ಲ. ಇದರಿಂದ ರಾಜ್ಯ ದಲ್ಲಿ 50 ಲಕ್ಷಕ್ಕೂ ಹೆಚ್ಚು ಫಲಾನು ಭವಿಗಳು ತೊಂದರೆ ಉಂಟಾಗ್ತಿದೆ ಎಂದು ಜುಲೈ 5 ರಂದು ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು.
ಇನ್ನೂ 30 ಲಕ್ಷ ಇರುವ ಅಸ್ಸಾಮಿ, ಮಲಯಾಳಿ ಫಲಾನುಭವಿಗಳಿಗೆ ಅದರದೆ ಭಾಷೆಯಲ್ಲಿ ಇದೆ. ಆದರೆ ಕನ್ನಡ ಭಾಷೆಯನ್ನು ಕಡೆಗಣಿಸಿ ರೋದು ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಇದೀಗ ಸರಿಪಡಿಸಲಾಗಿದ್ದು ವೆಬ್ ಸೈಟ್ ನಲ್ಲಿ ಕನ್ನಡ ಭಾಷೆ ಬಳಕೆ ಮಾಡಲಾಗುತ್ತಿದೆ.
ಯೋಜನೆ ಗೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹ ಹಾಗೂ ಮೊಬೈಲ್ ಮೂಲಕವೇ ಇ- ಕೆವೈಸಿ ಅಪ್ ನೀಡಬೇಕಾದ ವೇಳೆ ಅನ್ಯ ಭಾಷೆ ಬಾರದ ರೈತರು ಸಂಕಷ್ಟ ಅನುಭವಿಸುವಂತಾಗಿತ್ತು. ರಾಜ್ಯ ಕೃಷಿ ಇಲಾಖೆಯ ಕಣ್ಣಿಗೆ ಬಿದ್ದಿದ್ದು, ಅದೀಗ ಸರಿಪಡಿಸಲಾಗಿದೆ.
PublicNext
16/07/2022 03:20 pm