ದೇವನಹಳ್ಳಿ: ದೇವನಹಳ್ಳಿಯ ಚನ್ನರಾಯಪಟ್ಟಣ ಹೋಬಳಿಯ ಹತ್ತಕ್ಕೂ ಹೆಚ್ಚು ಹಳ್ಳಿಗಳು ಕೆಐಎಡಿಬಿ ಏರೋಟೆಕ್ ಪಾರ್ಕ್ ಗೆ ಸಾವಿರದ ಇನ್ನೂರು ಎಕರೆ ಜಮೀನು ಬಿಟ್ಟುಕೊಟ್ಟಿದ್ದಾರೆ. ಈಗ ಇಫ್ಕೋ ಕಾರ್ಯಕ್ರಮದ ಜಮೀನು ನೀಡಿದ ಸ್ಥಳೀಯ ಹಳ್ಳಿ ರೈತರಿಗೆ ಕಾರ್ಯಕ್ರಮಕ್ಕೆ ಪ್ರವೇಶವಿಲ್ಲ.
ಇನ್ನು, ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳಿಂದ ಎರಡನೇ ಹಂತದ KIADBಯ ಭೂಸ್ವಾಧೀನಕ್ಕೆ1777 ಎಕರೆ ನೋಟಿಫಿಕೇಷನ್ ಆಗಿದೆ. ಇದನ್ನು ವಿರೋಧಿಸಿ ಚನ್ನರಾಯಪಟ್ಟಣದಲ್ಲಿ 101 ದಿನಗಳಿಂದ ಭೂ ಸ್ವಾಧೀನ ಕೈಬಿಡಲು ಧರಣಿ ನಡೆಸಲಾಗ್ತಿದೆ.
ಎಲ್ಲಿ ಹೋರಾಟಗಾರರು ಸಿಎಂಗೆ ಮುತ್ತಿಗೆ ಹಾಕ್ತಾರೆ ಎಂಬ ಹಿನ್ನೆಲೆಯಲ್ಲಿ ರೈತ ಹೋರಾಟಗಾರರನ್ನು ಪೊಲೀಸರೇ ಕಾರ್ಯಕ್ರಮದ ಸ್ಥಳಕ್ಕೆ ಕರೆತಂದಿದ್ದಾರೆ. ಸುಮಾರು ಒಂದು ಗಂಟೆ ಹೊರಗೆ ಕಾದ ರೈತ ಹೋರಾಟಗಾರರು ಕೊನೆಗೂ CM ರನ್ನು ಭೇಟಿಯಾಗಿ ತಮ್ಮ ಅಳಲು ತೋಡಿಕೊಂಡರು. ಯಾವ ಕಾರಣಕ್ಕೂ ಭೂಸ್ವಾಧೀನಕ್ಕೆ ಕೊಡುವುದಿಲ್ಲ, KIADB ಭೂ ಸ್ವಾಧೀನ ಕೈಬಿಡಬೇಕೆಂದು ಒತ್ತಾಯಿಸಿದರು.
- ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ
Kshetra Samachara
15/07/2022 09:03 am