ಆನೇಕಲ್ : ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಪುರಸಭೆ ವ್ಯಾಪ್ತಿಯ ವಾರ್ಡ್ ನಂ.2ರಲ್ಲಿ ಪುರಸಭೆ ಅಧ್ಯಕ್ಷ ಪದ್ಮನಾಭ ಅಭಿವೃದ್ಧಿ ಕಾರ್ಯಗಳ ಕೆಲಸದ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದೇ ವಾರ್ಡ್ ನಲ್ಲಿ ಸುಮಾರು 8 ಕೋಟಿ 42 ಲಕ್ಷದ ಸ್ಲಮ್ ಬೋರ್ಡ್ ನ ಮತ್ತು ಪುರಸಭೆಯ ವಿಶೇಷ ಅನುದಾನದ ಸಹಯೋಗ ಹಾಗೂ ಅಧಿಕಾರಿಗಳ ಜೊತೆ ನಿರಂತರ ವಾದ ಪ್ರಯತ್ನದ ಫಲವಾಗಿ ವಾರ್ಡ್ ನ ಜನತೆಗೆ ಕನಿಷ್ಠ 80 ಕ್ಕೂ ಹೆಚ್ಚು ಹೊಸ ಮನೆಗಳು ನಿರ್ಮಾಣವಾಗಲಿದೆ.
ಇದೇ ವೇಳೆ ವಾರ್ಡ್ ನಲ್ಲಿ ಸಿಮೆಂಟ್ ರಸ್ತೆ ಕಾಮಗಾರಿ ವೀಕ್ಷಣೆ ಮಾಡಲಾಯಿತು ಇನ್ನು ತ್ಯಾಗರಾಜ ರಸ್ತೆಯ UGD ಒಳಚರಂಡಿಯ ಸಮಸ್ಯೆಯನ್ನು ಪರಿಶೀಲಿಸಿ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಪ್ರಸ್ತುತ ಕಾರ್ಯವನ್ನು ವಾರ್ಡ್ ನ ಪುರಸಭೆಯ ಸದಸ್ಯರಾದ ಮಹಾಂತೇಶ್ ಖುದ್ದು ಅಧಿಕಾರಿಗಳ ಜೊತೆಗೂಡಿ ಕಾರ್ಯ ನಿರ್ವಹಿಸುತ್ತಿದ್ದು. ಶೀಘ್ರ ಈ ಕಾರ್ಯ ಪೂರ್ಣಗೊಳ್ಳಲು ನಮ್ಮ ಸಹಕಾರವಿದೆ ಎಂದು ತಿಳಿಸಿದರು.
Kshetra Samachara
30/06/2022 07:32 pm