ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನೂತನ ಮುಖ್ಯ ಆಯುಕ್ತರಿಗೆ ಅಧಿಕಾರ ಹಸ್ತಾಂತರ ಕ್ಕೆ ಗೌರವ ಗುಪ್ತ ಮೀನಾಮೇಷ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಖ್ಯ ಆಯುಕ್ತರಾಗಿ ಇಂದು ಐಎಎಸ್ ಅಧಿಕಾರಿ‌ ತುಷಾರ್ ಗಿರಿನಾಥ್ ಅಧಿಕಾರ ವಹಿಸಿಕೊಂಡರು. ‌ಇದಕ್ಕೂ ಮುನ್ನ ಗಂಟೆಗಟ್ಟಲೇ ಕಾಯಬೇಕಾದ ಪ್ರಸಂಗ ನೂತನ ಚೀಪ್ ಕಮಿಷನರ್ ತುಷಾರ್ ಗಿರಿನಾಥ್ ಎದುರಾಯಿತು. ಬೆಳಗ್ಗೆ 9.45 ಕ್ಕೆ ಸಮಯ ನೀಡಿದ್ದ ತುಷಾರ್ ಗಿರಿನಾಥ್ ರವರಿಗೆ ಮಧ್ಯಾಹ್ನದ ವರೆಗೆ ಮಾಜಿ ಚೀಫ್ ಕಮಿಷನರ್ ಗೌರವ್ ಗುಪ್ತ ಕಾಯಿಸಿದರು.

ಅಧಿಕಾರ ಹಸ್ತಾಂತರ ಕ್ಕೆ ಬೆಳಗ್ಗೆ 9.45 , 11 ಹಾಗೂ 12.30 ಮೂರು ಸಮಯ ನಿಗದಿಯಾಗಿತ್ತು. ಈ ವೇಳೆಯಲ್ಲಿ ಗೌರವ್ ಗುಪ್ತಾ ರವರು ಬಾರದ ಹಿನ್ನೆಲೆಯಲ್ಲಿ ಹೊಸ ಚೀಫ್ ಕಮಿಷನರ್ ಕೆಂಪೇಗೌಡ , ಅಂಬೇಡ್ಕರ್ ,ಲಕ್ಷ್ಮಿ ದೇವಿ, ಹಾಲಪ್ಪ, ಡಾ.ರಾಜ್ ಕುಮಾರ್ ,ಪುನೀತ್ ರಾಜಕುಮಾರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸಮಯ ಕಳೆದರು.‌

ಸಹಜವಾಗಿ ನೂತನ ಚೀಫ್ ಕಮಿಷನರ್ ತುಷಾರ್ ಗಿರಿನಾಥ್ ಇರಿಸು- ಮುರುಸು ಆದಂತಿದ್ದರು. ಅಂತಿಮವಾಗಿ ಬಿಬಿಎಂಪಿ ‌ಕಚೇರಿಗೆ ಬಂದ ಗೌರವ್ ಗುಪ್ತಾ ತುಷಾರ್ ಗಿರಿನಾಥ್ ರವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

Edited By :
PublicNext

PublicNext

06/05/2022 05:52 pm

Cinque Terre

35.6 K

Cinque Terre

0

ಸಂಬಂಧಿತ ಸುದ್ದಿ