ಆನೇಕಲ್: ಕೇಂದ್ರದ ಅಗ್ನಿಪಥ ನೇಮಕಾತಿ ಯೋಜನೆ ಹಿಂಪಡೆಯುವಂತೆ ಒತ್ತಾಯಿಸಿ ಭಾರತದಾದ್ಯಂತ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಕೇಂದ್ರ ಸಚಿವ ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ ಅಗ್ನಿಪಥ್ ಯೋಜನೆ ಬಗ್ಗೆ ಅರ್ಥ ಮಾಡಿಕೊಳ್ಳದೆ ಪ್ರತಿಭಟನೆ ಮಾಡುವವರು ಮೂರ್ಖರು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಅಗ್ನಿಪಥ ನೇಮಕಾತಿ ಯೋಜನೆ ಇದು ಉದ್ಯೋಗ ವಲ್ಲ ರಕ್ಷಣಾ ಇಲಾಖೆ ಮುಖಾಂತರ ತಾಂತ್ರಿಕ ಶಿಕ್ಷಣದಿಂದ ವಂಚಿತರಾಗಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಕಾಂಗ್ರೆಸ್ನ ಕುಮ್ಮಕ್ಕು ನಿಂದ ಪ್ರತಿಭಟನೆಗಳು ನಡೆದಿದೆ. ಕಾಂಗ್ರೆಸ್ನವರು ಸಹ ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ ಅಗ್ನಿಪಥ ನೇಮಕಾತಿ ಯೋಜನೆ ಅದು ಎಲ್ಲರಿಗೂ ಕೂಡ ಅನುಕೂಲವಾಗಲಿದೆ ಎಂದು ತಿಳಿಸಿದರು.
Kshetra Samachara
19/06/2022 09:58 pm