ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಟಾಚಾರಕ್ಕೆ ನಡೆದ ವಾರ್ಡ್ ಸಭೆ

ಬೆಂಗಳೂರು: ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಸ್ತೇನಹಳ್ಳಿಯಲ್ಲಿ ಇಂದು ವಾರ್ಡ್ ಸಭೆ ಆಯೋಜನೆ ಮಾಡಲಾಗಿತ್ತು. ಜತಗೆ ಇದರ ಉದ್ದೇಶ ವಾರ್ಡ್ ಗಳಲ್ಲಿ ಸಾರ್ವಜನಿಕ ಕುಂದುಕೊರತೆಗಳ ನೀಗಿಸುವ ಸಲುವಾಗಿ ವಾರ್ಡ್ ಸಭೆಯನ್ನು ಕರೆಯಲಾಗಿತ್ತು. ಆದರೆ ಸಮಸ್ಯೆಗಳನ್ನು ಆಲಿಸುವ ಅಧಿಕಾರಿಗಳೇ ಗೈರು ಹಾಜರಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಯಿತು.

ಇನ್ನು ವಾರ್ಡ್ ಸಭೆಯಲ್ಲಿ ಸರ್ಕಾರಿದಿಂದ ಬರುವ ಅನುದಾನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. 11ಇದ್ದ ಕಾರ್ಯಕ್ರಮ 12 ಗಂಟೆ ಅದರೂ ಸಹ ಅಧಿಕಾರಿಗಳು ಬಂದಿರಲಿಲ್ಲ, ಇನ್ನು ಈ ವಾರ್ಡ್ ಸಭೆ ಯಲ್ಲಿ ಐದರಿಂದ ಆರು ಜನ ಮಾತ್ರ ಭಾಗಿಯಾಗಿದ್ದರು. ಇನ್ನು ಪಂಚಾಯಿತಿ ಪಿಡಿಓ ಅಧಿಕಾರಿಯೇ ಗೈರು ಹಾಜರಾಗಿದ್ದು ಸಮರ್ಪಕ ಮಾಹಿತಿ ಇಲ್ಲದೆ ಜನರು ವಾಪಸಾದರು, ಇದಕ್ಕೆಲ್ಲಾ ಪ್ರಮುಖವಾಗಿ ಸಭೆಯನ್ನು ಪ್ರಚಾರ ಮಾಡದಿರುವುದೇ ಕಾರಣ ಎಂದು ಅಲ್ಲಿನ ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದಾರೆ.

Edited By : PublicNext Desk
Kshetra Samachara

Kshetra Samachara

29/07/2022 08:47 pm

Cinque Terre

3.04 K

Cinque Terre

0

ಸಂಬಂಧಿತ ಸುದ್ದಿ