ಬೆಂಗಳೂರು: ಗಾಯದ ಮೇಲೆ ಬರೆ ಹಾಕಿದರೆ ಹೇಗಾಗ್ತದೋ ಹಾಗೆಯೇ ಆಗಿದೆ ದೇವನಹಳ್ಳಿ ತಾಲೂಕಿನ ಚನ್ನರಾಯ ಪಟ್ಟಣ ಹೋಬಳಿಯ 11 ಹಳ್ಳಿಗಳ ಹೋರಾಟಗಾರರ ಪರಿಸ್ಥಿತಿ.
ಕಳೆದ 134 ದಿನಗಳಿಂದ KIADB ಭೂ ಸ್ವಾಧೀನ ಕೈ ಬಿಡುವಂತೆ ಒತ್ತಾಯಿಸಿ ಚನ್ನರಾಯಪಟ್ಟಣ ರೈತರು ಶಾಂತಿಯುತ ಪ್ರತಿಭಟನೆ ನಡೆಸಿಕೊಂಡು ಬರ್ತಿದ್ದಾರೆ. ಸರ್ಕಾರ ಮಾತ್ರ ಭೂ ಸ್ವಾಧೀನದಿಂದ ಹಿಂದಕ್ಕೆ ಸರಿಯುತ್ತಿಲ್ಲ. ಹೀಗಾಗಿ ಬೆಂಗಳೂರು
ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಸುಧಾಕರ್ ಸ್ವಾತಂತ್ರ್ಯ ದಿನಾಚರಣೆಗೆ ದೇವನಹಳ್ಳಿಗೆ ಆಗಮಿಸಿದ್ದರು.
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರ ಗಮನ ಸೆಳೆಯಲು ಹತ್ತಾರು ರೈತರು ಸಭಾಂಗಣದತ್ತ ಮುನ್ನುಗ್ಗಲು ಯತ್ನಿಸಿದಾಗ ದೇವನಹಳ್ಳಿ ಪೊಲೀಸರು ರೈತ ಹೋರಾಟಗಾರರನ್ನು ವಶಕ್ಕೆ ಪಡೆದು 71 ಜನರ ವಿರುದ್ಧ ಮಹಿಳೆಯರು, ವೃದ್ಧರು, ವಿದ್ಯಾರ್ಥಿಗಳು ಎನ್ನದೆ FIR ದಾಖಲಿಸಿದ್ದಾರೆ. ಈ ಎಲ್ಲಾ ವಿಷಯಗಳ ಕುರಿತು ರೈತರ ಜೊತೆ ನಮ್ಮ ಪ್ರತಿನಿಧಿ ಸುರೇಶ್ ಬಾಬು ನಡೆಸಿರುವ Chit chat ನಿಮಗಾಗಿ...
PublicNext
17/08/2022 07:10 pm