ಬೆಂಗಳೂರು: ಕಬ್ಬು ಬೆಳೆಗೆ ಒಟ್ಟು ಉತ್ಪಾದನಾ ವೆಚ್ಚ ಹಾಗೂ ಶ್ರಮದಿಂದ ಬೆಳೆದ ರೈತನ ಲಾಭಾಂಶವನ್ನು ಸೇರಿಸಿ ಒಂದು ವೈಜ್ಞಾನಿಕ ಬೆಲೆ ನಿಗದಿ ಮಾಡಿ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.
ರೈತರ ನಿಯೋಗದ ಜತೆ ಸಿಎಂ ಭೇಟಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಫ್ಆರ್ಪಿ ದರ ಸದ್ಯಕ್ಕೆ 2900 ರೂಪಾಯಿ ನಿಗದಿ ಮಾಡಿದ್ದಾರೆ. ಉತ್ಪಾದನಾ ವೆಚ್ಚಕ್ಕೆ 3200 ಖರ್ಚು ಆಗುತ್ತೆ ಅಂತಾ ಕೃಷಿ ಇಲಾಖೆಯವರೇ ಹೇಳ್ತಿದ್ದಾರೆ. ಇದಕ್ಕೆ ಲಾಭವನ್ನ ಸೇರಿಸಿ ಬೆಲೆಯನ್ನ ನಿಗದಿ ಮಾಡಿ ಅಂತಾ ಸಿಎಂಗೆ ಮನವಿ ಮಾಡಿದ್ದೇವೆ. ನಮ್ಮ ಬೇಡಿಕೆಗಳನ್ನ ಪರಿಗಣಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
Kshetra Samachara
05/10/2021 05:16 pm