ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತಿರಂಗದಲ್ಲಿ ಮಿಂದೆದ್ದ ವಿಧಾನಸೌಧ

ವರದಿ- ಪ್ರವೀಣ್ ರಾವ್

ಬೆಂಗಳೂರು: ಕಣ್ಣು ಹಾಯಿಸಿದೆಡೆಯೆಲ್ಲಾ ರಾಷ್ಟ್ರಧ್ವಜದ ಹಾರಾಟ.. ಭಾರತಮಾತೆಗೆ ಜಯಘೋಷ. ಮೂಡಣದ ಸೂರ್ಯ ಮೇಲೇರುತ್ತಿರುವಂತೆ ಪುಟಿದೆದ್ದ ಉತ್ಸಾಹದ ಅಲೆ...ಇಂದು ಬೆಳ್ಳಂಬೆಳಗ್ಗೆ ಇಂಥದ್ದೊಂದು ಅದ್ಭುತವಾದ ದೃಶ್ಯ ಕಂಡು ಬಂದಿದ್ದು ರಾಜ್ಯದ ಶಕ್ತಿ ಸೌಧ ವಿಧಾನಸೌಧದ ಮುಂಭಾಗದಲ್ಲಿ..!

ಭಾರತಸ್ವಾತಂತ್ರ್ಯೋತ್ಸವದ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ಹರ್ ಘರ್ ತಿರಂಗಾ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ..

ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಎಲ್ಲರಿಗೂ ಶುಭಾಶಯಗಳನ್ನು ಕೋರಿದರುಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳು ರಾಷ್ಟ್ರಧ್ವಜವನ್ನು ತಮ್ಮ ಕೈಯಲ್ಲಿ ಹಿಡಿದು ದೇಶ ಪ್ರೇಮ ಮೆರೆದರು. ದೇಶಭಕ್ತಿ ಗೀತೆಗಳು ಸಭಿಕರನ್ನು ರಂಜಿಸಿದವು.

ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿಗಳಾದ ರಘುನಾಥ್ ಮಲ್ಕಾಪುರೆ, ಸಚಿವರಾದ ಸುನೀಲ್ ಕುಮಾರ್, ಡಾ.ಕೆ.ಸುಧಾಕರ್, ಗೋಪಾಲಯ್ಯ, ಬೈರತಿ ಬಸವರಾಜ್, ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Edited By : Somashekar
PublicNext

PublicNext

13/08/2022 03:52 pm

Cinque Terre

20.35 K

Cinque Terre

0

ಸಂಬಂಧಿತ ಸುದ್ದಿ