ಬೆಂಗಳೂರು : ರಾಜಾಜಿನಗರ ವಿಧಾನಸಭಾ ಕ್ಷೇತ್ರದ,ಪ್ರಕಾಶನಗರ ವಾರ್ಡ್ ನಲ್ಲಿರುವ ನವೀಕರಣಗೊಂಡ ಸರಕಾರಿ ಹಿರಿಯ ಪ್ರಾಥಮಿಕ ಪ್ರೌಢಶಾಲೆ ಮತ್ತು ವರ್ಣಚಿತ್ರ ಕಲಾಕೃತಿಯನ್ನು ಮಾಜಿ ಶಿಕ್ಷಣ ಸಚಿವ,ಶಾಸಕ ಎಸ್.ಸುರೇಶ್ ಕುಮಾರ್ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ದೇಶ ಅಭಿವೃದ್ದಿಯಾಗಬೇಕಾದರೆ ಶಿಕ್ಷಣ ಮುಖ್ಯ.ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು.ಮಕ್ಕಳಿಗೆ ಉತ್ತಮ ಶಿಕ್ಷಣ ಲಭಿಸಲು ಉತ್ತಮ ವಾತಾವರಣ ಕಲ್ಪಿಸಬೇಕು ಆದ್ದರಿಂದ ಶಾಲೆಯನ್ನು ನವೀಕರಣ ರೀತಿಯಲ್ಲಿ ಸೌಂದರ್ಯಿಕರಣ
ಗೊಳಿಸಲಾಗಿದೆ ಉತ್ತಮ ವಾತವರಣವಿದ್ದಾಗ ಮಕ್ಕಳು ಓದಲು,ಕಲಿಯಲು ಸುಗಮವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಮಹಾನಗರ ಪಾಲಿಕೆ ಸದಸ್ಯ ರವೀಂದ್ರನ್,ಬಿ.ಜೆ.ಪಿ.ಮಂಡಲದ ಅಧ್ಯಕ್ಷ ರಾಘವೇಂದ್ರರಾವ್ ,ಶಾಲೆಯ ಎಸ್.ಡಿ.ಎಂ.ಸಿ.ಯ ಲಕ್ಷ್ಮೀನಾರಾಯಣ್,ವಿ.ತ್ಯಾಗರಾಜ್,ಮುಖ್ಯ ಶಿಕ್ಷಕಿ ಜಯಮ್ಮ,ಶಿಕ್ಷಣಾಧಿಕಾರಿ ಉಮಾದೇವಿ,ಬಿ.ಜೆ.ಪಿ.ಮುಖಂಡರಾದ ಟಿ.ಎನ್. ರಮೇಶ್, ಸುದರ್ಶನ್,ಪ್ರವೀಣ್ ರವರು ಉಪಸ್ಥಿತರಿದ್ದರು.
Kshetra Samachara
15/07/2022 05:53 pm