ಯಲಹಂಕ: ಬೆಂಗಳೂರಿನ ಯಲಹಂಕ ತಾಲೂಕು ದಿಬ್ಬೂರು ಪ್ರೆಸಿಡೆನ್ಸಿ ಯೂನಿವರ್ಸಿಟಿ ಕಾರ್ಯಕ್ರಮದ ಅವ್ಯವಸ್ಥೆ ವಿರುದ್ದ ಅಕ್ಕಪಕ್ಕದ ಗ್ರಾಮಗಳ ನೂರಾರು ಜನ ಪ್ರತಿಭಟನೆ ನಡೆಸಿದರು. ಹೌದು ನಿನ್ನೆ ಪ್ರೆಸಿಡೆನ್ಸಿ ಕಾಲೇಜ್ ಬಳಿ ದೊಡ್ಡ ಮಟ್ಟದ ಕಲ್ಚರಲ್ ಫೆಸ್ಟ್ ನಡೆಯಿತು. ಈ ಫೆಸ್ಟ್ ನಲ್ಲಿ 44 ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ಭಾಗಿಯಾಗಿದ್ರು. ಪ್ರೆಸಿಡೆನ್ಸಿ ಕಾಲೇಜಿನ 13 ಸಾವಿರ, ರಿಜಿಸ್ಟರ್ ಮಾಡಿಕೊಂಡ 5000 ಸಾವಿರ ಸೇರಿ ಒಟ್ಟು 22000 ಜನ ನಿನ್ನೆ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು.
ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ರಿಂದ ನಿನ್ನೆ ಸಂಜೆ 6 ಗಂಟೆಯಿಂದ 11 ಗಂಟೆವರೆಗೂ ರಾಜಾನುಕುಂಟೆ & ಮಧುರೆ ರಸ್ತೆ ಸಂಪೂರ್ಣ ಜಾಮ್ ಆಗಿತ್ತು . ಜೊತೆಗೆ ಡಿಜೆ ಸೌಂಡ್ ಅಬ್ಬರ, ಕುಡಿದು, ಕುಣಿದು ಡ್ರಗ್ಸ್ ಸೇವಿಸಿ, ಅಸಭ್ಯ ವರ್ತನೆಗಳಿಂದ ಸ್ಥಳೀಯರು ತೀವ್ರ ತೊಂದರೆ ಅನುಭವಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿ, ಅನಾನುಕೂಲಗಳಿಗೆ ಕಾರಣವಾದ ಪ್ರೆಸಿಡೆನ್ಸಿ ಕಾಲೇಜ್ ವಿರುದ್ಧ ಶಿಸ್ತು ಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.
ತಡರಾತ್ರಿ 12 ಗಂಟೆಯವರೆಗೂ ದಿಬ್ಬೂರು ರಸ್ತೆ ಬಳಿ ಫುಲ್ ಟ್ರಾಫಿಕ್ ಜಾಮ್ ಆಗಿದ್ರಿಂದ ಜನ ಸಂಚಾರ, ಸರಕು ಸಾಗಣೆ ಬಂದ್ ಆಗಿತ್ತು. ಯಲಹಂಕ, ದೊಡ್ಡಬಳ್ಳಾಪುರ, ಬೆಂಗಳೂರು, ರಾಜಾನುಕುಂಟೆ, ಸೊಣ್ಣೇನಹಳ್ಳಿ, ಬ್ಯಾತ, ಮದುರೆಗಳಿಗೆ ಹೋಗಿ ಬರುವ ಸಾವಿರಾರು ಜನ ಪ್ರಯಾಣಿಕರು, ಕಾರು, ಬೈಕ್ ಸೇರಿ ವಿವಿಧ ವಾಹನ ದಟ್ಟಣೆಯಿಂಧ ತುಂಬಾ ತೊಂದರೆ ಅನುಭವಿಸಿದರು.
ಇನ್ನು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ರಾಜಾನುಕುಂಟೆ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್, ಯಲಹಂಕ
Kshetra Samachara
28/05/2022 10:23 pm