ಬೆಂಗಳೂರು: ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪ್ರಾತೀಯ ಪಾಲನಾ ಕೇಂದ್ರದ ಡೈರೆಕ್ಟರ್ ಫಾದರ್ ಫೌಲ್ ಸ್ಟೀನ್ ಲೋಬೋ ಅವರು ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕು ಎಂದರು.
ಕ್ಲಾರೆನ್ಸ್ ಶಾಲೆಯ ಅಡಳಿತ ಮಂಡಳಿ ಏನಾಗಿದೆ ನನಗೆ ಗೊತ್ತಿಲ್ಲ. ಯಾರ ಮೇಲೂ ಒತ್ತಾಯವಾಗಿ ಯಾವುದನ್ನೂ ಹೇರಬಾರದು. ಧರ್ಮದ ಬಗ್ಗೆ ಶಿಕ್ಷಣ ಕಡ್ಡಾಯ ಮಾಡುವುದು ತಪ್ಪು ಎಂದು ಮುತಾಲಿಕ್ ಹೇಳಿದ್ದರು, ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಫೌಲ್ ಸ್ಟೀನ್ ಲೋಬೋ, ಶಿಕ್ಷೆ ನೀಡುವ ಬಗ್ಗೆ ಯಾಕೆ ಹೇಳಬೇಕು..? ಕಾನೂನು ಇದೆ. ಈ ಹಿಂದೆ ಶಿಕ್ಷಣ ಸಚಿವರು ಪಠ್ಯದಲ್ಲಿ ರಾಮಾಯಣ ಭಗವದ್ಗೀತೆ ಕೊಡುವ ಬಗ್ಗೆ ಹೇಳಿದ್ದರು. ಎಲ್ಲದರ ಬಗ್ಗೆ ಸಮಾನ ಮನಸ್ಥಿತಿಯಿಂದ ಯೋಚನೆ ಮಾಡಬೇಕು ಎಂದಿದ್ದಾರೆ.
PublicNext
25/04/2022 03:22 pm