ಬೆಂಗಳೂರು: ನಗರದ ಬಸವನ ಗುಡಿ ಬಿಎಂಎಸ್ ಸಂಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳು ನಿನ್ನೆ ರಾತ್ರಿ ಪ್ರತಿಭಟನೆ ನಡೆಸಿದರು. ಡಿಸೆಂಬರ್ ತಿಂಗಳಿಂದ ತರಗತಿ ಆರಂಭವಾಗಿಲ್ಲ ಎಂದು ಆರೋಪಿಸಿ ಧರಣಿ ನಡೆಸಿ ದರು.
ಈ ಸಂಜೆ ಕಾಲೇಜಿನ 196 ವಿದ್ಯಾರ್ಥಿಗಳು ಡಿಸೆಂಬರ್ 31 ರಂದು ಡಿಸಿಇಟಿ KEA ಆದೇಶದಂತೆ ಮೂರು ವರ್ಷದ ಲ್ಯಾಟರಲ್ ಎಂಟ್ರಿ ಉನ್ನತ ಶಿಕ್ಷಣಕ್ಕಾಗಿ ಹಲವು ವೃತ್ತಿಪರ ಶಿಕ್ಷಣ ಪಡೆಯಲು ಬಂದಿದ್ದಾರೆ.
ದಾಖಲಾದ ದಿನದಿಂದ ಇಲ್ಲಿಯವರೆಗೆ ಯಾವುದೇ ತರಗತಿ ಪಾಠ ಶಾಲೆ ನಡೆಸಿರುವುದಿಲ್ಲ ಪ್ರಾಚಾರ್ಯರನ್ನು ನೀವು ಯಾವ ಉದ್ದೇಶಕ್ಕೆ ಪಾಠಶಾಲೆ ಪ್ರಾರಂಭಿಸಿಲ್ಲ ಎಂದು ಕೇಳಿದ್ದಲ್ಲಿ ಅವರಿಂದ ಯಾವುದೇ ಸ್ಪಷ್ಟ ಮಾಹಿತಿ ಇಲ್ಲಿಯವರೆಗೆ ನಮಗೆ ದೊರಕಿಲ್ಲ ಹಾಗಾಗಿ ಇಂದು ನಾವು ಎಲ್ಲಾ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾಗಿ ತಿಳಿಸಿದ್ದಾರೆ.
Kshetra Samachara
16/02/2022 11:23 am