ಆನೇಕಲ್ - ತಾಲೂಕಿನ ಜಿಗಣಿ ಪುರಸಭೆಯ ವಾರ್ಡ್ ನಂ .6 ರಲ್ಲಿ ಕಾಂಗ್ರೆಸ್ ನಿಂದ ಎಂಬಿಬಿಎಸ್ ಅಂತಿಮ ವರ್ಷದ 22 ಗಿರಿಷ್ಮಾ ಶ್ರೀಧರ ಗೆಲವು ಸಾಧಿಸಿದ್ದಾರೆ.
ವೈಟ್ ಫೀಲ್ಡ್ ಬಳಿ ಇರುವ ವೈದೇಹಿ ವೈದ್ಯಕೀಯ ಕಾಲೇಜಿನಲ್ಲಿ ಅವರು ಎಂಬಿಬಿಎಸ್ ಓದುತ್ತಿದ್ದಾರೆ.ಅವರ ತಂದೆ ಈ ಹಿಂದೆ ಗ್ರಾಮ್ ಪಂಚಾಯತ್ ಸದಸ್ಯರಾಗಿದ್ದವರು.
ಗಿರಿಷ್ಮಾ 302 ಮತಗಳನ್ನು ಪಡೆದಿದ್ದು, ಪ್ರತಿಸ್ಪರ್ಧಿ ಬಿಜೆಪಿಯ ಕೃಷ್ಣಮ್ಮ ಮುನಿಕೃಷ್ಣಪ್ಪ ರವರು 204 ಮತಗಳನ್ನು ಪಡೆದಿದ್ದಾರೆ.
Kshetra Samachara
01/01/2022 02:09 pm