ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪಠ್ಯ ಪರಿಷ್ಕರಣೆಗೆ ರೋಹಿತ್ ಚಕ್ರತೀರ್ಥ ಸಮಿತಿಯ ಸಂಭಾವನೆ ಕೇಳಿದ್ರೆ ಅಚ್ಚರಿಯಾಗುತ್ತೆ!

ಬೆಂಗಳೂರು: ರಾಜ್ಯದಲ್ಲಿ ತೀವ್ರ ವಿವಾದ- ಚರ್ಚೆಗೆ ಗ್ರಾಸವಾಗಿರುವ ಪಠ್ಯ ಪರಿಷ್ಕರಣೆಗಾಗಿ ರೋಹಿತ್‌ ಚಕ್ರತೀರ್ಥ ಸಮಿತಿ ಪಡೆದ ಸಂಭಾವನೆ ಎಷ್ಟು ಗೊತ್ತೇ? ಕೇವಲ 33 ಸಾವಿರ ರೂ.! ಅದರಲ್ಲೂ ಸರಕಾರ 28,600 ರೂ. ಬಾಕಿ ಉಳಿಸಿಕೊಂಡಿದ್ದು, ಇದರಿಂದ ಸಮಿತಿಗೆ ಸಿಕ್ಕಿರುವುದು ಕೇವಲ 5,200 ರೂ. ಮಾತ್ರ.

ಸಮಿತಿಯ ಒಟ್ಟು ವೆಚ್ಚ 50 ಲಕ್ಷ ರೂ. ವಿಶೇಷ ಎಂದರೆ, ಈ ಹಿಂದಿನ ಸಮಿತಿಗಳು ಪಡೆದ ಸಂಭಾವನೆಗಿಂತ ಐದಾರೂ ಪಟ್ಟು ಕಮ್ಮಿ. ಉಳಿದ ಸಮಿತಿಗಳು ಪಡೆದ ಸಂಭಾವನೆ 3.75 ಲಕ್ಷ ರೂ.ಗಳಿಂದ 5.45 ಲಕ್ಷ ರೂ.ಗಳಾಗಿದೆ. ಮುಡಂಬಡಿತ್ತಾಯ ಸಮಿತಿ ಫೋನ್‌ ಖರೀದಿಗೂ 3 ಸಾವಿರ ರೂ. ಪಡೆದಿತ್ತು. ಇನ್ನು ಒಟ್ಟಾರೆ ಪರಿಷ್ಕರಣೆ ವೆಚ್ಚ 3.63 ಕೋಟಿ ರೂ.ನಷ್ಟಾಗಿದೆ.

ಕರ್ನಾಟಕ ಪಠ್ಯ ಪುಸ್ತಕ ಸಂಘ 1ರಿಂದ 10ನೇ ತರಗತಿ ಪಠ್ಯ ಪುಸ್ತಕಗಳ ರಚನೆ- ಪರಿಷ್ಕರಣೆಗಾಗಿ 2021ರಲ್ಲಿ ರೋಹಿತ್‌ ಚಕ್ರತೀರ್ಥ ಸಮಿತಿ ರಚಿಸಿತ್ತು. ಈ ಸಮಿತಿಯು ಸಂಭಾವನೆ, ವಾಹನ ಭತ್ಯೆ, ಕಾರ್ಯಾಗಾರ ಹಾಗೂ ಭಾಷಾಂತರ ಕಾರ್ಯ, ಡಿಟಿಪಿ ಸೇರಿ ಒಟ್ಟು 49.99 ಲಕ್ಷ ರೂ. ವೆಚ್ಚ ಮಾಡಿದೆ. ಸಂಘವು ಇದರಲ್ಲಿ 28,600 ರೂ. ಬಾಕಿ ಉಳಿಸಿಕೊಂಡಿದೆ.

2010ರಲ್ಲಿ ಕರ್ನಾಟಕ ಪಠ್ಯ ಪುಸ್ತಕ ಸಂಘ ಪ್ರೊ. ಮುಡಂಬಡಿತ್ತಾಯ ಸಮಿತಿಗೆ 3.63 ಕೋಟಿ ರೂ., 2015ರಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಸಮಿತಿಗೆ 2.59 ಕೋಟಿ ರೂ. ನೀಡಿತ್ತು. ಸಂಭಾವನೆ ಲೆಕ್ಕಾಚಾರದಲ್ಲಿ ನೋಡಿದರೆ, ರೋಹಿತ್‌ ಚಕ್ರತೀರ್ಥ ಸಮಿತಿ 33,800 ರೂ., ಬರಗೂರು ಸಮಿತಿ 5,45,000 ರೂ. ಮತ್ತು ಮುಡಂಬಡಿತ್ತಾಯ ಸಮಿತಿ 3,75,000 ರೂ. ಪಡೆದಿದೆ.

ವರದಿ: ಗಣೇಶ್ ಹೆಗಡೆ

Edited By : Somashekar
PublicNext

PublicNext

05/07/2022 09:21 pm

Cinque Terre

72.03 K

Cinque Terre

1

ಸಂಬಂಧಿತ ಸುದ್ದಿ