ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮಕ್ಕೆ ಹೆಚ್ಚಿದ ಒತ್ತಡ

ವರದಿ ಗಣೇಶ್ ಹೆಗಡೆ

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ರೋಹಿತ್‌ ಚಕ್ರತೀರ್ಥ ನೇತೃತ್ವದ ಸಮಿತಿ ರದ್ದುಗೊಳಿಸಿ, ವರದಿ ತಿರಸ್ಕರಿಸುವಂತೆ ಆಗ್ರಹ ಹೆಚ್ಚಾಗುತ್ತಲೇ ಇದೆ. ಇದೀಗ ಸಾಹಿತಿಗಳು ಹಾಗೂ ಕನ್ನಡಪರ ಸಂಘಟನೆ ಬೀದಿಗೆ ಇಳಿದು ಹೋರಾಟ ಆರಂಭಿಸಿವೆ.

ವಾಯ್ಸ್ ಓವರ್ - ಸದ್ಯ ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣ ಆಗುತ್ತಿರುವ ವಿಚಾರ ಎಂದರೆ ಪಠ್ಯ ಪರಿಷ್ಕರಣೆ ವಿವಾದ. ಇದು ನಾನಾ ಮಜಲು ಪಡೆಯುತ್ತಿದೆ. ಕುವೆಂಪು ಅವರಿಗೆ ನಾಡಗೀತೆಯಲ್ಲಿ ಅಪಮಾನ ಮಾಡಿರೋದನ್ನು ವಿವಿಧ ಸಂಘಟನೆಗಳು ಖಂಡಿಸುತ್ತಿವೆ. ಇಂದು ಕರವೇ ನಾರಾಯಣ ಗೌಡ ಬಣ ಪ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸಿತು.

ವಾಯ್ಸ್ ಓವರ್- ಪಠ್ಯ ಪರಿಷ್ಕರಣ ಸಮಿತಿ ನನ್ನ ಯಾವುದಾದರು ಬರಹವನ್ನು ಆಯ್ಕೆ ಮಾಡಿ ಕೊಂಡಿದ್ದರೆ ಅದಕ್ಕೆ ನನ್ನ ಸಮ್ಮತಿ ಇರುವುದಿಲ್ಲ ಎನ್ನುವುದನ್ನು ಖಚಿತ ಪಡಿಸುತ್ತಿದ್ದೇನೆ ಎಂದು ಹಿರಿಯ ವಿದ್ವಾಂಸ ಡಾ| ಜಿ. ರಾಮಕೃಷ್ಣ ಅವರು ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ನಮ್ಮ ರಾಜ್ಯದ ಶಾಲೆಗಳ ಪಠ್ಯಪುಸ್ತಕಗಳ ಪರಿಷ್ಕರಣೆಯು ತೀರಾ ಅಪ ಮಾರ್ಗದಲ್ಲಿ ಸಾಗುತ್ತಿದೆ. ಶಿಕ್ಷಣವನ್ನು ಕೆಟ್ಟ ರಾಜಕೀಯಕ್ಕೆ ಗುರಿ ಮಾಡಲಾಗುತ್ತಿರುವುದು ಸರ್ವಥಾ ಕ್ಷಮಾರ್ಹವಲ್ಲ. ಮಕ್ಕಳಿಗೆ ವಿಷ ಉಣಿಸುವುದು ಬೌದ್ಧಿಕ ಕ್ಷೇತ್ರದಲ್ಲಿ ದುರಂತ ಎಂದವರು ದೂರಿದ್ದಾರೆ.

ವಾಯ್ಸ್ ಒವರ್- ಇದೇ ವೇಳೆ ವಿವಾದ ತೀವ್ರ ಸ್ವರೂಪದ ಪಡೆದುಕೊಳ್ಳುತ್ತಿದ್ದಂತೆ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಶಾಸಕ, ಪಕ್ಷದ ಮುಖಂಡರ ಜತೆಗೆ ಚರ್ಚೆಗಳು ಆಗಿದ್ದು, ಕುತೂಹಲ ಉಂಟುಮಾಡಿದೆ.

Edited By :
PublicNext

PublicNext

01/06/2022 03:39 pm

Cinque Terre

26.19 K

Cinque Terre

0

ಸಂಬಂಧಿತ ಸುದ್ದಿ