ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆನೇಕಲ್ : ಕಳಪೆ ಊಟ : ಆಡಳಿತ ವಿರುದ್ಧ ಬೀದಿಗಿಳಿದ ವಿದ್ಯಾರ್ಥಿಗಳು

ಆನೇಕಲ್ : ಆನೇಕಲ್ ಸರ್ಕಾರಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಸರಿಯಾದ ಊಟ ನೀಡುತ್ತಿಲ್ಲ, ಕಳಪೆ ಗುಣಮಟ್ಟದಲ್ಲಿ ಆಹಾರ ನೀಡುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಇಂದು ಆಡಳಿತ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ.

ಇಲ್ಲಿನ ಆನೇಕಲ್ ತೆಲಗರಹಳ್ಳಿ ಸಮೀಪ ಇರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಗೇಟ್ ನ ಮುಂಭಾಗದಲ್ಲಿ ಊಟದ ಸಮೇತ ಧರಣಿ ಕುಳಿತ ವಿದ್ಯಾರ್ಥಿಗಳು ಮೇಲಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದಿದ್ದರು.

ಸುಡುಬಿಸಿಲನ್ನು ಲೇಖಿಸದ ನೂರಾರು ವಿದ್ಯಾರ್ಥಿಗಳು ಬಿಸಿಲಿನಲ್ಲಿಯೇ ಕುಳಿತು ಧರಣಿ ಮಾಡಿದ್ದಾರೆ.

Edited By :
PublicNext

PublicNext

22/03/2022 09:17 pm

Cinque Terre

39.02 K

Cinque Terre

0

ಸಂಬಂಧಿತ ಸುದ್ದಿ