ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಂಗಳೂರು ವಿವಿ ಇಬ್ಬರು ಸಿಂಡಿಕೇಟ್ ಸದಸ್ಯರ ಅಮಾನತು.! ಸಾಮೂಹಿಕ ರಾಜೀನಾಮೆ ಎಚ್ಚರಿಕೆ

ಸೇವಾ ಅವಧಿ 8 ತಿಂಗಳು ಬಾಕಿ‌ ಇದ್ದರೂ ಬೆಂಗಳೂರು ವಿಶ್ವವಿದ್ಯಾಲಯದ ಇಬ್ಬರು ಸಿಂಡಿಕೇಟ್ ಸದಸ್ಯರನ್ನು ಅಮಾನತು ಮಾಡಲಾಗಿದೆ. ಕಾರಣ ತಿಳಿಸದೇ ಅವಧಿಗೂ ಮುನ್ನವೇ ಪ್ರೇಮ್ ಮತ್ತು ಗೋವಿಂದರಾಜು ಎಂಬ ಇಬ್ಬರು ಸಿಂಡಿಕೇಟ್ ಸದಸ್ಯರು ಅಮಾನತುಗೊಳಿಸಲಾಗಿದೆ.

ಇಬ್ಬರ ರಿಲೀವ್ ಬೆನ್ನಲ್ಲೇ ಎಲ್ಲಾ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಇಂದು ಬಾಕಿ 6 ಜನ ಸದಸ್ಯರು ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಕುಲಪತಿಗಳ ನೇಮಕ ಕ್ರಮಬದ್ಧವಾಗಿಲ್ಲ ಎಂದು ಸಿಂಡಿಕೇಟ್ ಸದಸ್ಯರು ದಾಖಲೆ ಒದಗಿಸಿದ್ದರು. ಆದರೆ ಕುಲಪತಿ ಅವರು ಸುಪ್ರೀಂ ಕೋರ್ಟ್ ನಿಂದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು.

ಇದೀಗ ಮತ್ತೆ ಕುಲಪತಿ ಪ್ರೋ ಡಾ.ಕೆ.ಆರ್ .ವೇಣುಗೋಪಾಲ ವಿರುದ್ಧ ಮತ್ತೆ ತಿರುಗಿ ಬಿದ್ದಿದ್ದಾರೆ. ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಸಿಂಡಿಕೇಟ್ ಸದಸ್ಯರ ವಾದವಾಗಿದೆ.

Edited By :
Kshetra Samachara

Kshetra Samachara

12/04/2022 11:50 am

Cinque Terre

4.41 K

Cinque Terre

0

ಸಂಬಂಧಿತ ಸುದ್ದಿ