ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶರತ್ ಬಚ್ಚೇಗೌಡರಿಂದ ಹೊಸಕೋಟೆಯಲ್ಲಿ ಕೆಂಪೇಗೌಡ ಜಯಂತಿ ಮೂಲಕ ಒಕ್ಕಲಿಗರ ಶಕ್ತಿ ಪ್ರದರ್ಶನ

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ನಗರದಲ್ಲಿ ಕೆಂಪೇಗೌಡ ಜಯಂತಿ ಆಚರಣೆ ಮೂಲಕ ಸಚಿವ ಎಂಟಿಟಿ ನಾಗರಾಜ್ ವಿರುದ್ಧ ಶರತ್ ಬಚ್ಚೇಗೌಡ ಶಕ್ತಿ ಪ್ರದರ್ಶನಕ್ಕಿಳಿದರಾ ಶರತ್ ಬಚ್ಚೇಗೌಡ.!? ಸುಮಾರು 5ಸಾವಿರಕ್ಕೂ ಅಧಿಕ ಒಕ್ಕಲಿಗ ಸಮುದಾಯದ ಜನರನ್ನು ಸೇರಿಸಿ ಹೊಸಕೋಟೆಯಲ್ಲಿ ಜಯಂತಿ ಆಚರಣೆ ಮಾಡಲಾಗುತ್ತಿದೆ. ಈ ಮೂಲಕ ಕಳೆದ ಸಲ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಹೊಸಕೋಟೆಗೆ ಕರೆಯಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಕಾರ್ಯಕ್ರಮಕ್ಕೆ ಸವಾಲೆಸೆಯುವಂತಿತ್ತು ಇವತ್ತಿನ ಕೆಂಪೇಗೌಡ ಜಯಂತಿ ಆಚರಣೆ.

50ಕ್ಕೂ ಹೆಚ್ಚು ಪಲ್ಲಕ್ಕಿಗಳು, ಕಲಾತಂಡಗಳು, ಹೊಸಕೋಟೆ ಪ್ರಮುಖ ರಸ್ತೆ, ಬೀದಿಗಳಲ್ಲಿ ಮೆರವಣಿಗೆ ನಡೆಸಿದವು. ಈ ಮೆರವಣಿಗೆಯಲ್ಲಿ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಮನಗರ ಸಂಸದ ಡಿ.ಕೆ.ಸುರೇಶ್, ಚಿಕ್ಕಬಳ್ಳಾಪುರ ಸಂಸದ ಬಿ.ಎನ್ ಬಚ್ಚೇಗೌಡ, ಬ್ಯಾಟರಾಯನಪುರ ಶಾಸಕ ಕೃಷ್ಣಭೈರೇಗೌಡ, ಶರತ್ ಬಚ್ಚೇಗೌಡ ಮೆರವಣಿಗೆಯ ಭಾಗವಾಗಿದ್ದರು. ಇನ್ನು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ, ಚಂದ್ರಶೇಖರ ಸ್ವಾಮೀಜಿ ಸೇರಿದಂತೆ ಬೆಂಗಳೂರು ಗ್ರಾಮಾಂತರದ ಒಕ್ಕಲಿಗ ಸಮುದಾಯ ಭಾಗವಹಿಸಿ ಕೆಂಪೇಗೌಡ ಜಯಂತಿಗೆ ಕಳೆ ತುಂಬಿದರು.

Edited By :
PublicNext

PublicNext

29/06/2022 03:53 pm

Cinque Terre

30.02 K

Cinque Terre

0

ಸಂಬಂಧಿತ ಸುದ್ದಿ