ಗಣೇಶೋತ್ಸವಕ್ಕೆ ಅವಕಾಶ ಕೊಡಲ್ಲ ಎಂದಿದ್ದ ಜಮೀರ್ ಹೇಳಿಕೆ ವಿಚಾರಕ್ಕೆ ಸಚಿವ ಆರ್. ಅಶೋಕ್ ಟಾಂಗ್ ಕೊಟ್ಟಿದ್ದಾರೆ. 75 ವರ್ಷಗಳಿಂದ ವಿರೋಧ ಮಾಡ್ತಾ ಇದ್ದಾರೆ. ಕೋಳಿ ಕೇಳಿ ಮಸಾಲೆ ಅರೆಯಬೇಕಾ? ಸರ್ಕಾರ ಮುಂದೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದಿದ್ದಾರೆ.
ಇನ್ನು ಗಣೇಶ ಹಬ್ಬಕ್ಕೆ ಸಂಬಂಧಿಸಿದಂತೆ ಕಂದಾಯ, ಬಿಬಿಎಂಪಿ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಕೋರ್ಟ್ ಆದೇಶಗಳನ್ನ ಕೂಡ ಪರಿಶೀಲನೆ ಮಾಡಲಾಯ್ತು. ಎಜಿ ಜೊತೆ ಕೂಡ ಮಾತನಾಡಿದ್ದೇವೆ. ಪೊಲೀಸ್ ಇಲಾಖೆ ಬಂದೋಬಸ್ತ್ ಬಗ್ಗೆ ಅವರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದಾರೆ. ಐದು ಅರ್ಜಿಗಳನ್ನ ಪರಿಶೀಲನೆ ಮಾಡಿದ್ದೇವೆ. ೨ ಅರ್ಜಿಗಳು ಮಾತ್ರ ಲೋಕಲ್ ನವರು ಕೊಟ್ಟಿದ್ದಾರೆ. ಇನ್ನು ೨ ದಿನ ಅರ್ಜಿ ಕೊಡೋಕೆ ಅವಕಾಶ ಕೊಡುತ್ತೇವೆ. ಮುಸ್ಲಿಂ ಸಂಘಟನೆಗಳು ಈ ಮೈದಾನಕ್ಕೋಸ್ಕರ ಫೈಟ್ ಮಾಡ್ತಿದ್ದಾರೋ ಅವರು ಸುಪ್ರೀಂಕೋರ್ಟ್‌ಗೆ ಸೋಮವಾರ ಅಪೀಲ್ ಹೋಗ್ತಾರೆ ಅನ್ನೋ ಮಾಹಿತಿ ಇದೆ. ಹೀಗಾಗಿ ಸಾರ್ವಜನಿಕರಿಗೆ ಹೇಳ್ತಿದ್ದೇನೆ ಅರ್ಜಿ ಹಾಕೋರು ಹಾಕಬಹುದು. ನಾನು ಕಂದಾಯ ಸಚಿವನಾಗಿ ಆಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಆರ್. ಅಶೋಕ್ ಹೇಳಿದ್ದಾರೆ.
ಸಿಎಂ ಜೊತೆ ಗಣೇಶ ಹಬ್ಬದ ತಯಾರಿಗಾಗಿ ಸುಮಾರು ೨ ಗಂಟೆಗಳ ಕಾಲ ಬಗ್ಗೆ ಚರ್ಚೆ ನಡೆಸಿದ್ದೇನೆ. ಇವತ್ತು ಸಭೆ ನಡೆಸುವಂತೆ ಸೂಚಿಸಿದ್ರು. ಅದರಂತೆ ಸಭೆ ಮಾಡಿದ್ದೇವೆ. ಸಭೆಯಲ್ಲಿ ಗಣೇಶೋತ್ಸವ ಮಾಡೋದಾದರೇ ಹೇಗೆ ಮಾಡಬೇಕು. ಮುಂಜಾಗ್ರತಾ ಕ್ರಮಗಳೇನು ತೆಗೆದುಕೊಳ್ಳಬೇಕು. ಎಲ್ಲಿ ಕೂರಿಸಬೇಕು, ಸಂಭ್ರಮಾಚರಣೆ ಬಗ್ಗೆ ಜೊತೆಗೆ ಮೆರವಣಿಗೆ ಎಲ್ಲಿಂದ ಸಾಗಬೇಕು ಪ್ರತಿಯೊಂದರ ಬಗ್ಗೆ ಇವತ್ತು ಚರ್ಚೆ ಮಾಡಿದ್ದೇವೆ. ಆಚರಣೆ ಮಾಡಬೇಕಾದರೇ ಹೇಗೆ ಮಾಡಬೇಕು ಅನ್ನೋದರ ಬಗ್ಗೆ ಚರ್ಚೆಯಾಗಿದೆ.
ಆಗಸ್ಟ್ 15ಕ್ಕೆ ಕಂದಾಯ ಇಲಾಖೆಯವರಾಗಿ ಸ್ವಾತಂತ್ರ್ಯೋತ್ಸವ ಆಚರಿಸಿದ್ದೀವೋ ಅದೇ ರೀತಿ ಚಾಣಕ್ಯ ತಂತ್ರ ಮಾಡಬೇಕಾಗುತ್ತದೆ. ಯಾರು ಅಲ್ಲಿ ಗಣೇಶ ಕೂರಿಸಬೇಕು ಅಂದುಕೊಂಡಿದ್ದಿರೋ ಅವ್ರು ಅರ್ಜಿ ಕೊಡಲಿ. ಸದ್ಯ ಎರಡು ಅರ್ಜಿಗಳು ಬಂದಿವೆ ಅಷ್ಟೇ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.
PublicNext
27/08/2022 04:40 pm