ಬೆಂಗಳೂರು: ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪದ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಲಾಗಿದೆ. ಈ ಸಂಬಂಧ ಪೋಸ್ಟ್ ಹಾಕಿದವನ ವಿರುದ್ದ ಮೈಸೂರು ಯೂತ್ ಕಾಂಗ್ರೆಸ್ ಹುಣಸೂರು ಪೊಲೀಸ್ ಠಾಣೆಗೆ ದೂರು ನೀಡಿದೆ.
ಗೋವಿಂದ ನಾಯಕ ಎಂಬುವವರ ವಿರುದ್ದ ದೂರು ದಾಖಲಿಸಲಾಗಿದ್ದು, ಗೋವಿಂದ್ ಹುಣಸೂರಿನ ಕಲ್ಕುಣಿಕೆಯ ನಿವಾಸಿಯಾಗಿದ್ದಾನೆ. ಈತ ಇದೇ ನನ್ನ ಕೊನೆ ಚುನಾವಣೆ ಅಂತಾ ಸಿದ್ದರಾಮಯ್ಯ ಹೇಳಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿದ್ದ ಈ ಬಗ್ಗೆ ಅವಹೇಳನಕಾರಿ ಹಾಗೂ ಶಾಂತಿ ಕದಡುವ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾನೆ. ನೀನು ಎಲ್ಲೇ ನಿಂತರೂ ಸೋಲು. ನಿನ್ನಂತಹ ದುರಂಹಕಾರಿ ದೇಶದಲ್ಲಿ ಯಾರು ಇಲ್ಲ ಸಿದ್ರಾಮುಲ್ಲಾ.. ಅಂತಾ ಕಾಮೆಂಟ್ ಮಾಡಿದ್ದಾನೆ ಎಂದು ದೂರಿನಲ್ಲಿ ಕಾಮೆಂಟ್ ಉಲ್ಲೇಖಿಸಿ ದೂರು ನೀಡಲಾಗಿದೆ.
PublicNext
18/07/2022 10:33 pm