ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಕೇಸ್ ಪ್ರಕರಣ ಯೂಟರ್ನ್ ಪಡೆದುಕೊಂಡಿದ್ದು, ಅನಂತರಾಜು ಆತ್ಮಹತ್ಯೆ ಕೇಸ್ ಆರೋಪಿ ರೇಖಾ ಇಂದು ಅನಂತರಾಜು ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ.
ಬ್ಯಾಡರಹಳ್ಳಿ ಠಾಣೆಗೆ ಆಗಮಿಸಿ ದೂರು ನೀಡಿದ ರೇಖಾ, ಅನಂತರಾಜು ಸಾವಿಗೆ ಪತ್ನಿ ಸುಮಾ ಕಾರಣ ಮತ್ತು ನನಗೆ ಜೀವಭಯ ಇದ್ದು ಈ ಕುರಿತು ತನಿಖೆ ನಡೆಸಿ ರಕ್ಷಣೆ ನೀಡುವಂತೆ ದೂರು ದಾಖಲಿಸಿದ್ರು. ಸದ್ಯ ರೇಖಾ ದೂರಿನ ಹಿನ್ನೆಲೆ ಬ್ಯಾಡರಹಳ್ಳಿ ಪೊಲೀಸ್ರು ಎನ್ ಸಿಆರ್ ದಾಖಲಿಸಿ ಹಳೇ ಪ್ರಕರಣದಲ್ಲಿ ಈ ದೂರನ್ನ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
Kshetra Samachara
01/06/2022 01:13 pm