ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸರ್ಕಾರಿ ಜಾಗದಲ್ಲಿ ಬಣವೆ ಇಟ್ಟು ತನ್ನದೆ ಜಾಗವೆಂದ ಭೂಪ- ಆಸ್ಪತ್ರೆ ಕಟ್ಟಲು ಅಡ್ಡಿ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ತಾಲೂಕಿನ ಆದಿನಾರಾಯಣಹೊಸಹಳ್ಳಿಯ ಸರ್ವೆ ನಂಬರ್ 8ರ 10 ಗುಂಟೆ ಜಾಗ ಗ್ರಾಮದ ಶಾಂತಿಯನ್ನ ಕದಡಿದೆ. ಈ ಜಾಗದ ಮೇಲೆ ಕಣ್ಣಿಟ್ಟಿರುವ ಚಂದ್ರಶೇಖರ್ ಕುಟುಂಬ ಸರ್ಕಾರಿ ಜಾಗದಲ್ಲಿ ಬವಣೆಗಳನ್ನು ಇಟ್ಟು ತನ್ನದೆಂದು ಹೇಳುತ್ತಿದ್ದಾರೆ.

ಸರ್ಕಾರಿ ಜಾಗವನ್ನ ಸಾರ್ವಜನಿಕ ಅನುಕೂಲಕ್ಕಾಗಿ ಬಳಸಿಕೊಳ್ಳಬೇಕೆಂಬುದು ಗ್ರಾಮಸ್ಥರ ಸಂಕಲ್ಪ, ಗ್ರಾಮಸ್ಥರ ಒತ್ತಾಸೆಗೆ ಈಗಾಗಲೇ ಕೆಲವು ಕಾರ್ಖಾನೆಗಳು ಸಿಎಸ್‌ಆರ್ ಫಂಡ್‌ನಲ್ಲಿ ಗ್ರಾಮದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಿಸಲು ಮುಂದಾಗಿದೆ. ಆದರೆ ಗ್ರಾಮದಲ್ಲಿನ ಸರ್ಕಾರಿ ಜಾಗವನ್ನು ಚಂದ್ರಶೇಖರ್ ಕುಟುಂಬ ಬಿಟ್ಟು ಕೊಡುವ ಮನಸ್ಸು ಮಾಡುತ್ತಿಲ್ಲ. ಇದರಿಂದ ಗ್ರಾಮಕ್ಕೆ ಬರುತ್ತಿದ್ದ ಆಸ್ಪತ್ರೆ ನಮ್ಮಿಂದ ದೂರವಾಗುತ್ತಿದೆ ಎಂಬ ನೋವು ಗ್ರಾಮಸ್ಥರದ್ದು.

Edited By : Shivu K
Kshetra Samachara

Kshetra Samachara

04/03/2022 09:02 am

Cinque Terre

2.27 K

Cinque Terre

0

ಸಂಬಂಧಿತ ಸುದ್ದಿ