ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಮೊಮ್ಮಗಳು ಸೌಂದರ್ಯ ಪಾರ್ಥೀವ ಶರೀರವನ್ನ ಈಗ ಪತಿ ನೀರಜ್ ಅವರ ಅಬ್ಬಿಗೆರೆ ನಿವಾಸಕ್ಕೆ ತರಲಾಗಿದೆ. ಇಲ್ಲಿ ಸಕಲ ವಿಧಿ-ವಿಧಾನಗಳು ನಡೆಯಲಿವೆ. ಈಗಾಗಲೇ ಪುರೋಹಿತರೂ ನೀರಜ್ ಮನೆಗೆ ಬಂದಿದ್ದಾರೆ. ಲಿಂಗಾಯತ ಸಂಪ್ರದಾಯದಂತೆ ಸೌದರ್ಯ ಅಂತ್ಯಕ್ರಿಯೆಯ ನೆರವೇರಲಿವೆ.
ಶಿವಗಂಗೆಯ ರುದ್ರಮುನಿ ಶಿವಾಚಾರ್ಯ ಶ್ರೀಗಳ ಮಾರ್ಗದರ್ಶನದಂತೇನೆ ಅಂತ್ಯಕ್ರಿಯೆ ನಡೆಯಲಿವೆ. ಈಗಾಗಲೇ ಹೆಸರಘಟ್ಟ ರಸ್ತೆಯ ಅಬ್ಬಿಗೆರೆಯಲ್ಲಿರೋ ಮರಿಸ್ವಾಮಿ ಫಾರ್ಮ್ ಹೌಸ್ ನಲ್ಲಿಯೇ ಅಂತ್ಯ ಕ್ರಿಯೆಯ ಸಕಲ ಸಿದ್ಧತೆ ನಡೆದಿದೆ.
ಈಗಾಗಲೇ ಇಲ್ಲಿಗೆ ತಾತ ಬಿಎಸ್.ಯಡಿಯೂರಪ್ಪ ಆಗಮಿಸಿದ್ದಾರೆ. ಕುಟುಂಬದ ಇತರ ಸದಸ್ಯರು ಇಲ್ಲಿಗೆ ಆಗಮಿಸಿದ್ದಾರೆ.
Kshetra Samachara
28/01/2022 04:35 pm