ಬೆಂಗಳೂರು: ಸಹಕಾರಿ ಸಚಿವ ಎಸ್ ಟಿ ಸೋಮಶೇಖರ್ ಪುತ್ರನಿಗೆ ಅಶ್ಲೀಲ ವಿಡಿಯೋ ವಿಚಾರವಾಗಿ ಬೆದರಿಕೆ ಹಿನ್ನೆಲೆ ಈಗಾಗಲೇ ಈ ಕುರಿತು ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಖ್ಯಾತ ಜ್ಯೋತಿಷಿ ಚಂದ್ರಶೇಖರ್ ಪುತ್ರ ಅರೆಸ್ಟ್ ಆಗಿದ್ದು, ತನಿಖೆ ಮುಂದುವರಿದಿದೆ.ಇನ್ನೂ ಪ್ರಕರಣದಲ್ಲಿ ಶಾಸಕರ ಪುತ್ರಿ ಹೆಸರನಲ್ಲಿದ್ದ ಸಿಮ್ ನಿಂದ ಬೆದರಿಕೆ ಬಂದಿರೋದು ತನಿಖೆಯಿಂದ ಗೊತ್ತಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವ್ರು ಇಂದು ಸುದ್ದಿ ಗೋಷ್ಠಿ ನಡೆಸಿದ್ರು. ನನ್ನ ಪುತ್ರಿ ಕಳೆದ ಮಾರ್ಚ್ ನಲ್ಲೆ ವಿದ್ಯಾಭ್ಯಾಸಕ್ಕೆ ಯುಕೆ ಗೆ ತೆರಳಿದ್ದಾಳೆ. ತನ್ನ ಕ್ಲಾಸ್ ಮೆಂಟ್ ರಾಕೇಶ್ ಕೇಳಿದ್ದ ಅಂತ ವಾಟ್ಸ್ ಅಪ್ ಓಟಿಪಿ ಹೇಳಿದ್ದಾಳೆ. ರಾಕೇಶ್ ಮತ್ತು ನನ್ನ ಮಗಳು ಚಿಕ್ಕಂದಿನಿಂದ ಗೆಳೆಯರು ಒಟ್ಟಿಗೆ ಓದಿದವರು.ಬ್ಯುಸಿನೆಸ್ ವಿಚಾರವಗಿ ಓಟಿಪಿ ಕೇಳಿದ್ದಾನೆ. ಬ್ಯುಸಿನೆಸ್ ಗೆ ಹೆಲ್ಪ್ ಆಗ್ಲಿ ಅಂತ ಓಟಿಪಿ ನೀಡಿದ್ದಾಳೆ ಅಷ್ಟೆ.
ಈ ವಿಚಾರವಾಗಿ ನಾನು ಸಚಿವ ಸೋಮಶೇಖರ್ ಅವರ ಬೇಟಿ ಮಾಡಿದ್ದೆ.ತಪ್ಪು ಮಾಡದೇ ಈ ರೀತಿ ಆಗಿರುವುದು ಬೇಸರ ತರಿಸಿದೆ.
ತಪ್ಪಿತಸ್ಥರು ಯಾರು ಇದ್ದಾರೆ ಅವರ ಮೇಲೆ ಕ್ರಮ ಕೈ ಗೊಳ್ಳಬೇಕು, ಸೋಮಶೇಖರ್ ನಾನು ಒಳ್ಳೆಯ ಗೆಳೆಯರು.ಸದ್ಯ ತನಿಖೆ ಮುಂದುವರೆದಿದೆ. ಯಾರ್ ಯಾರಿದ್ದಾರೆ ಅನ್ನೋದು ತಿಳಿಯಬೇಕು.ನನ್ನ ತೇಜೋವಧೆಗೆ ಪ್ರಯತ್ನ ನಡೆಸಲಾಗ್ತಾ ಇದೇಯಾ ? ಅನ್ನೋ ಅನುಮಾನ ಕಾಡ್ತಾ ಇದೆ. ಡಿ. 28 ಕ್ಕೆ ಸಿಸಿಬಿ ಅಧಿಕಾರಿಗಳು ಮನೆಗೆ ಬಂದಿದ್ರು. ಆ ವೇಳೆ ರಾಕೇಶ್ ನನ್ನು ವಿಚಾರಣೆ ಮಾಡಿದ್ದಾರೆ.
Kshetra Samachara
10/01/2022 12:42 pm