ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಜನರಿಗೆ ಮೋಸ ಮಾಡಿ ತೊಂದ್ರೆ ಕೊಡ್ತಿದ್ದ ನಕಲಿ ಲಾಯರ್ ಅಂದರ್

ದೇವನಹಳ್ಳಿ: ಈತ ಅಂತಿಂಥಾ ಆಸಾಮಿಯಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ದ್ಯಾವರಹಳ್ಳಿ ನಾರಾಯಣಸ್ವಾಮಿ ಅಂತ. ಸ್ವಂತ ಊರಲ್ಲೆ ಅಕ್ಕಪಕ್ಕದ ಮನೆ, ಜಮೀನುಗಳಿಗೆ ನಕಲಿ ದಾಖಲಿ ಸೃಷ್ಟಿಸಿ ತನ್ನ ಹೆಸರಿಗೆ ನೋಂದಣಿ ಮಾಡಿಕೊಳ್ತಾನೆ. ನಂತರ ಇದೆಲ್ಲಾ ನನ್ನ ಜಮೀನು‌ ನೀವು ಖಾಲಿ ಮಾಡಿ ಅಂತ ಅವಾಜ್ ಹಾಕ್ತಾನೆ. ಜೊತೆಗೆ ನಾನು ಹೈಕೋರ್ಟ್ ಲಾಯರ್ ಅಂತ ಹೇಳ್ಕೊಳ್ತಿದ್ದ ಆಸಾಮಿಯ ಬೆನ್ನು ಬಿದ್ದ ಪೊಲೀಸರಿಗೆ ಗೊತ್ತಾಗಿದ್ದು, ಈತ ನ್ಯಾಯವಾದಿಯೇ ಅಲ್ಲ ನಕಲಿ ಅಂತ. ಹಾಗೆಯೇ ವಿಶ್ವನಾಥಪುರ ಪೊಲೀಸ್ ಠಾಣೆಯ ರೌಡಿಶೀಟರ್ ಈಗ ವಂಚನೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಲ್ಲಿ ಕಂಬಿ ಎಣಿಸ್ತಿದ್ದಾನೆ.

ತನ್ನ ಮನೆಗೆ ಹೊಂದಿಕೊಂಡ ಅಂಗವಿಕಲ ಅಜ್ಜಿ ಜಮೀನಿಗೂ ನಕಲಿ ದಾಖಲೆ ಸೃಷ್ಟಿಸಿ ತನ್ನ ಹೆಸರಿಗೆ ಮಾಡಿಕೊಂಡಿದ್ದಾನೆ. ಮತ್ತೊಬ್ಬ ಬಡ ಕುಟುಂಬಕ್ಕು ಸಹ ತೊಂದರೆ ಕೊಟ್ಟು ಅವರ ಜಮೀನಿನ ದಾಖಲೆ ತಿದ್ದಿ, ಮೋಸ ಮಾಡಿದ್ದಾನೆ. ಹೀಗೆ ದ್ಯಾವರಹಳ್ಳಿ ಗ್ರಾಮದ ಸರ್ವೆ ನಂಬರ್ 55,56,61 ಭೂಮಿ ಮೇಲೆ ಕಣ್ಣಾಕಿದ್ದ. ಗ್ರಾಮದ ವಂಚನೆ ದೂರಿನನ್ವಯ ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಈತ ಯಾವ ಪಕ್ಷ ಅಧಿಕಾರದಲ್ಲಿರುತ್ತೊ, ಆ ರಾಜಕೀಯ ಪಕ್ಷದಲ್ಲಿ ಗುರ್ತಿಸಿಕೊಳ್ತಾನೆ. ಈಗ ಸದ್ಯ ಬಿಜೆಪಿ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದಾನೆ. ವಿಶ್ವನಾಥಪುರ ಪೊಲೀಸ್ ಠಾಣೆಯ ರೌಡಿಶೀಟರ್ ಆದ ಈ ನಕಲಿ ಲಾಯರ್ ನಾರಾಯಣಸ್ವಾಮಿ ಮೇಲೆ ಆರ್.ಟಿ ನಗರ, ಸಂಜಯನಗರ, ದೇವನಹಳ್ಳಿ, ಯಲಹಂಕ ವ್ಯಾಪ್ತಿಯ ಠಾಣೆಗಳಲ್ಲಿ ಹತ್ತಾರು ದೂರುಗಳಿವೆ. ವಂಚನೆ ಸಂಬಂಧ ಜೈಲು ಶಿಕ್ಷೆ ಸಹ ಅನುಭವಿಸಿ ಬಂದಿರೊ ದ್ಯಾವರಹಳ್ಳಿ ನಾರಾಯಣಸ್ವಾಮಿ ಮತ್ತೆ ಜನರಿಗೆ ವಂಚಿಸಿ ಮತ್ತೆ ಜೈಲುಹಕ್ಕಿಯಾಗಿದ್ದಾನೆ.

Edited By :
PublicNext

PublicNext

23/08/2022 11:41 am

Cinque Terre

21.66 K

Cinque Terre

0

ಸಂಬಂಧಿತ ಸುದ್ದಿ