ವರದಿ- ಗೀತಾಂಜಲಿ
ಬೆಂಗಳೂರು: ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಆಗಿರುವುದು ಅನ್ಯಾಯ.
ಘಟನೆಯನ್ನು ನಾವು ಖಂಡಿಸುತ್ತೇವೆ.ಇದರಲ್ಲಿ ಮಧ್ಯ ಪ್ರವೇಶ ಮಾಡಲು ನಾವು ತಯಾರಿಲ್ಲ.ಇದರಲ್ಲಿ ರಾಜಕಾರಣ ಮಾಡಿದ್ರೆ ಉಪಯೋಗ ಇಲ್ಲ.ನಿಮ್ಮ ತಪ್ಪನ್ನು ಒಪ್ಪಿಕೊಳ್ಳಿ ಸಾಕು.ಕಾರ್ಯಕರ್ತರ ಆಕ್ರೋಶ, ಜನರ ಆಕ್ರೋಶ ಮೊದಲಿಂದ ಇದೆ.
ಪ್ರಾರಂಭದಿಂದ ಒಂದೊಂದೆ ನಿಯಂತ್ರಣ ಮಾಡಿದ್ರೆ ಈ ಸಂದರ್ಭ ಬರುತ್ತಿರಲಿಲ್ಲ.ನೀವು ಏನಾದರೂ ತನಿಖೆ ಮಾಡಿ.ಯಾರನ್ನಾದರೂ ಬ್ಯಾನ್ ಮಾಡಿ.ಅವರ ಕುಟುಂಬಕ್ಕೆ ನ್ಯಾಯ ಕೊಡಿ.ರಾಜ್ಯಕ್ಕೆ ಶಾಂತಿ ಕೊಡಿ ಸಾಕು.ಅವರವರ ಧರ್ಮ ರಕ್ಷಣೆ ಮಾಡುವ ಕೆಲಸ ಅವರವರು ಮಾಡ್ತಾರೆ.ನೀವು ಅವರು ಕಾರಣ ,ಇವರು ಕಾರಣ ಎನ್ನುವ ಬದಲು ಪೊಲೀಸ್ ರಿಗೆ ಫ್ರೀ ಹ್ಯಾಂಡ್ ಬಿಡಬೇಕೆಂದು ಸರ್ಕಾರಕ್ಕೆ ಡಿಕೆಶಿ ಒತ್ತಾಯ ಮಾಡಿದ್ದಾರೆ.
PublicNext
28/07/2022 02:22 pm