ಬೆಂಗಳೂರು: ಅನಂತರಾಜು ಆತ್ಮಹತ್ಯೆ ಕೇಸ್ ದಿನಕ್ಕೊಂದು ತಿರುವು ಪಡೆದು ಕೊಳ್ಳುತ್ತಿದ್ದು, ಅನಂತರಾಜು ಸಾವಿಗೆ ಕಾರಣ ಎನೂ? ಯಾರೂ ಎನ್ನುವುದು ಇನ್ನೂ ನಿಗೂಢವಾಗಿದೆ. ಈ ಹಿನ್ನೆಲೆ ಇಂದು ಅನಂತರಾಜು ಅಭಿಮಾನಿಗಳು,ಬಿಜೆಪಿ ಮುಖಂಡರು ಬ್ಯಾಡರಹಳ್ಳಿ ಠಾಣೆ ಮುಂದೆ ಜಮಾಯಿಸಿ ತನಿಖೆ ಮಂದಗತಿಯಲ್ಲಿ ಸಾಗುತ್ತಿದೆ ತಪ್ಪಿತಸ್ಥರಿಗೆ ಶೀಘ್ರವೇ ಶಿಕ್ಷೆ ಆಗಬೇಕು ಎಂದು ಪೊಲೀಸರಿಗೆ ಮನವಿ ಮಾಡಿದರು.
ಇನ್ಸ್ ಪೆಕ್ಟರ್ ರವಿಕುಮಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇನ್ನು ಠಾಣೆ ಎದುರು ಆಕ್ರೋಶ ಹೊರಹಾಕಿದ ಅಭಿಮಾನಿಗಳು ಶೀಘ್ರವೇ ತಪ್ಪಿತಸ್ಥರಿಗೆ ಶಿಕ್ಷೆ ನೀಡಿ ಎಂದರು.
ತನಿಖೆ ವಿಳಂಬವಾಗುತ್ತಿದೆ ತಪ್ಪಿತಸ್ಥರು ಸುಮಾ ಅಥವಾ ರೇಖಾ ಯಾರೇ ಆಗಿರಲಿ ಬೇಗ ಶಿಕ್ಷೆ ನೀಡಿ ಇದರಲ್ಲಿ ರಾಜಕೀಯ ಕೈವಾಡ ಕೂಡ ಇದೆ ಎಂದರು.
ಅನಂತರಾಜುಗೆ ಬಿಬಿಎಂಪಿ ಚುನಾವಣೆ ಟಿಕೆಟ್ ತಪ್ಪಿಸಲು ಈ ಷಡ್ಯಂತರ ಮಾಡಿದ್ದಾರೆ.ಅವರನ್ನು ಇನ್ನೆರಡು ದಿನದಲ್ಲಿ ಪತ್ತೆ ಮಾಡಿ ಅರೆಸ್ಟ್ ಮಾಡಬೇಕೆಂದು ಗಡುವು ನೀಡಿದ್ರು.
ಒಟ್ಟಾರೆಯಲ್ಲಿ ಅನಂತರಾಜು ಆತ್ಮಹತ್ಯೆ ಕೇಸ್ ನಲ್ಲಿ ರೇಖಾ ಮತ್ತು ಸುಮಾ ಆಡಿಯೋ ವಾರ್ ಜೊತೆಗೆ ಈಗ ಬಿಜೆಪಿ ಮುಖಂಡರು ಅಭಿಮಾನಿಗಳೂ ಬಂದಿರೋದು ಖಾಕಿಗೆ ದೊಡ್ಡ ತಲೆನೋವಾಗಿದೆ.
Kshetra Samachara
06/06/2022 09:48 pm