ಬೆಂಗಳೂರು : ಬಿಜೆಪಿ ಮುಖಂಡ ಅನಂತರಾಜು ಕೇಸ್ ಬಗೆದಷ್ಟು ಆಳಕ್ಕೆ ಹೋಗ್ತಿದೆ. ಸುಮಾ ಮತ್ತು ರೇಖಾ ಪರ ವಿರೋಧದ ಸಾಕ್ಷ್ಯ ಗಳು ದಿನಕ್ಕೊಂದರಂತೆ ಹೊರ ಬೀಳ್ತಿವೆ.
ಮೇಲ್ನೋಟಕ್ಕೆ ಎಲ್ಲವೂ ಸತ್ಯದಂತೆ ಕಂಡ್ರು ಹೊರಬರ್ತಿರೋ ಮಾಹಿತಿಯ ಅಸಲಿಯತ್ತು ಏನೂ ಎನ್ನುವುದನ್ನು ಪೊಲೀಸ್ರೇ ಪತ್ತೆಮಾಡಬೇಕು. ಇನ್ನೂ ಇಂದು ರೇಖಾ ಜೈಲಿನಿಂದ ಹೋರಬರ್ತಿರೋ ಹೊತ್ತಲ್ಲಿ ಮತ್ತೊಂದು ವಾಟ್ಸ್ ಆಪ್ ಚಾಟ್ ರಿವಿಲ್ ಆಗಿದೆ. ರೇಖಾ ಮತ್ತು ಸುಮಾ ಅನಂತರಾಜು ಸಂಪರ್ಕಿತ ವ್ಯಕ್ತಿ ಜತೆಗೆ ನಡೆಸಿದ್ದಾರೆನ್ನಲಾದ ವಾಟ್ಸ್ ಅಪ್ ಚಾಟಿಂಗ್ ರಿವಿಲ್ ಆಗಿದ್ದು, ಈ ವಾಟ್ಸಾಪ್ ಚಾಟಿಂಗ್ ನಲ್ಲಿ ಸೆಟ್ಲ್ ಮೆಂಟ್ ಬಗ್ಗೆ ಪ್ರಸ್ತಾಪ ಆಗಿರೋದು ಸಾಕಷ್ಟು ಕುತೂಹಲ ಮೂಡಿಸಿದೆ.
ಅನಂತರಾಜು ನನಗೆ ಮೋಸ ಮಾಡಿದ್ದಾನೆ.ನನ್ನ ಮಾನ ಮರ್ಯಾದೆ ಧಕ್ಕೆ ತಂದಿದ್ದಾನೆ.ನನ್ನ ಮಕ್ಕಳಿಗಾಗಿ ಯಾರ ಮಾರ್ಯಾದೆ ಕಳೆಯೋದಕ್ಕು ನಾನು ಸಿದ್ಧ ಅನ್ನೋ ರೀತಿ ರೇಖಾ ಮಾಡಲಾದ ಮೇಸೆಜ್ ಎಂದು ಸ್ಕ್ರೀನ್ ಶಾಟ್ ಓಡಾಡ್ತಿವೆ. ಈ ಚಾಟ್ ನಲ್ಲಿ ಅನಂತರಾಜು ನನ್ನ ಜೊತೆ ಕಳೆದ ಖಾಸಗಿ ವಿಡಿಯೋಗಳು ನನ್ನ ಬಳಿ ಇದೆ ಅದನ್ನ ಅವನ ಹೆಂಡ್ತಿಗೆ ಕಳಿಸಿದ್ರೆ ಅವಳೇ ಅನಂತರಾಜುನ ಸಾಯಿಸ್ತಾಳೆ.
ಅಷ್ಟೊಂದು ಆಶ್ಲೀಲವಾಗಿದೆ ಆ ವಿಡಿಯೋಗಳು ಆ ರೀತಿ ಆಗ್ಬಾರ್ದು ಅನ್ನೋದಾದ್ರೆ ಅನಂತರಾಜು ಮೇ 15 ರ ಒಳಗೆ ನನ್ನ ಭೇಟಿ ಮಾಡ್ಬೇಕು ಸೆಟ್ಲಮೆಂಟ್ ಮಾಡಿಕೊಂಡು ನೆಮ್ಮದಿಯಾಗಿರಲಿ ಎಂದು ಚಾಟ್ ಸಾರಂಶ ಹೇಳುತ್ತೆ.
ಇನ್ನೊಂದು ಮೂಲಗಳ ಪ್ರಕಾರ ಅನಂತರಾಜ ಬಚಾವ್ ಮಾಡೋಕೆ ರೇಖಾ ಅನಂತರಾಜು ಸೇರಿ ಈ ರೀತಿನೇ ಮಾತನಾಡಿ ಸುಮಾಳನ್ನು ನಂಬಿಸುವ ಕೆಲಸ ಮಾಡಿದ್ರು ಎಂದು ಹೇಳಲಾಗ್ತಿದೆ. ಆದ್ರೆ ಅದೇ ಇಂದು ರೇಖಾಳಿಗೆ ಮುಳುವಾಗಿದ್ಯಾ ಎನ್ನುವ ಪ್ರಶ್ನೆ ಮೂಡಿದೆ.
Kshetra Samachara
26/05/2022 01:43 pm