ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಅಣ್ಣೇಶ್ವರ ಗ್ರಾಮ ಪಂಚಾಯ್ತಿ ರಾಜ್ಯದಲ್ಲೆ ಅತಿಹೆಚ್ಚು ಆದಾಯ ಹೊಂದಿರುವ ಗ್ರಾಮ ಪಂಚಾಯ್ತಿ. ಇದೀಗ ಕರ್ತವ್ಯಲೋಪ ಮತ್ತು ಪ್ರಕರಣದ ಇತ್ಯರ್ಥಕ್ಕೆ ಪ್ರಭಾವ ಬಳಸಿರುವುದು ಸಾಭೀತಾದ ಹಿನ್ನಲೆಯಲ್ಲಿ ಮಾನ್ಯ ಕೋರ್ಟ್ ಅಣ್ಣೇಶ್ವರ ಪಿಡಿಒ ಕುಮಾರ್ ಗೆ ಛೀಮಾರಿ ಹಾಕಿದೆ. ಪರಿಣಾಮವಾಗಿ ಬೆಂಗಳೂರು ಗ್ರಾಮಾಂತರ ಸಿಇಒ ರೇವಣಪ್ಪ ಪಿಡಿಒ ಕುಮಾರ್ ನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಹೈಕೋರ್ಟ್ ನಲ್ಲಿ ರಿಕಾಲ್ ಅರ್ಜಿ ವಿಚಾರಣೆ ವೇಳೆ ಪಿಡಿಒ ಕುಮಾರ್ ದುರ್ನಡತೆಯ ಜೊತೆಗೆ ಜಿಲ್ಲಾ ಪಂಚಾಯತ್ ವಕೀಲರ ಮೇಲೆ ಪ್ರಭಾವ ಬೀರಲು ಮುಂದಾದ ವಿಚಾರವಾಗಿ ಕೋರ್ಟ್ ಗರಂ ಆಗಿತ್ತು. ಸಿಇಓ ಗೆ ಶಿಸ್ತು ಕ್ರಮದ ಬಗ್ಗೆ ಪ್ರಶ್ನೆ ಮಾಡಿ ಹೈಕೋರ್ಟ್ ಗರಂ ಆದ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾ ಪಂಚಾಯ್ತಿ ಅಣ್ಣೇಶ್ವರ ಪಿಡಿಒ ಕುಮಾರ್ ನನ್ನು ಅಮಾನತುಗೊಳಿಸಿದೆ.
ಜಿಲ್ಲಾ ಪಂಚಾಯ್ತಿ ಸಿಇಒ ರೇವಣಪ್ಪನ ಕೃಪಾಕಟಾಕ್ಷದಿಂದಲೇ ಪಿಡಿಓ ಕುಮಾರ್ ಅಣ್ಣೇಶ್ವರ ಗ್ರಾಮಪಂಚಾಯ್ತಿಲಿ ಮಾಡಬಾರದಷ್ಟು ಅಕ್ರಮ ಎಸಗಿದ್ದ. ಕೋಟ್ಯಾಂತರ ಕಾಮಗಾರಿಲಿ 10% ಪಿಡಿಓ, 10% ಇಒಇನ್ನತ್ತು ಪರ್ಸೆಂಟ್ ಸಿಇಒ ಪಡೆಯುತ್ತಿದ್ದರೂ ಎಂಬ ಗಂಭೀರ ಆರೋಪಗಳಿವೆ. ಕುಮಾರ್‌ಗೂ ಮೊದಲು ಮಂಜುನಾಥ್ ಕಾಂಬ್ಳೆ ಎಂಬ ಪಿಡಿಒರನ್ನು ಉದ್ದೇಶಪೂರ್ವಕವಾಗಿ ಎತ್ತಂಗಡಿ ಮಾಡಿಸಿ ಇದೇ ಸಿಇಒ ರೇವಣಪ್ಪ ಈಗ ಅಮಾನತ್ತಾದ ಇದೇ ಕುಮಾರ್‌ನನ್ನು ತಂದು ಕೂರಿಸಿದ್ದ. ಕೊಳ್ಳೆ ಹೊಡೆದಷ್ಟು ಹೊಡೆದು ಹೈಕೋರ್ಟಿನ ಬೀಸುವ ದೊಣ್ಣೆಯಿಂದ ಇದೀಗ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸಿಇಒ ರೇವಣಪ್ಪರವರು ಕುಮಾರ್‌ನನ್ನು ಬಲಿಕೊಟ್ಟು ಎಸ್ಕೇಪ್ ಆಗಿದ್ದಾನೆ. ಅಣ್ಣೇಶ್ವರ ಗ್ರಾಮಪಂಚಾಯ್ತಿಯಲ್ಲಿ ಕೋಟ್ಯಾಂತರ ರುಪಾಯಿ ಭ್ರಷ್ಟಾಚಾರ ತಾಂಡವ ಆಡುತ್ತಿದೆ ಎನ್ನುವುದಕ್ಕೆ ಪಿಡಿಒ ಕುಮಾರ್ ಸಸ್ಪೆಂಡ್ ಆಗಿರುವುದೇ ದೊಡ್ಡ ಸಾಕ್ಷಿ.
PublicNext
06/08/2022 05:55 pm