ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆಪಿಎಸ್‌ಸಿಯಲ್ಲೂ ಅಕ್ರಮದ ಘಾಟು: ಪೊಲೀಸ್ ಆಯುಕ್ತರಿಗೆ ಅಭ್ಯರ್ಥಿಯಿಂದ ದೂರು

ಬೆಂಗಳೂರು: ಪಿಎಸ್ಐ ಪರೀಕ್ಷಾ ನೇಮಕಾತಿಯಲ್ಲಿ ಅಕ್ರಮದ ತನಿಖೆ ಬೆನ್ನಲ್ಲೆ ಕೆಪಿಎಸ್‌ಸಿ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ಕೇಳಿ ಬಂದಿತ್ತು.‌ ಇದೀಗ ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ರಾಜ್ಯ ಲೆಕ್ಕಪರಿಶೋಧನೆ ಹಾಗೂ‌ ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕ ಹುದ್ದೆಗಳಲ್ಲಿ ನಡೆದ ಸಂದರ್ಶನದಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಸಂದರ್ಶನಕ್ಕೂ ಮುನ್ನ ಅಭ್ಯರ್ಥಿಗಳಿಗೆ ವಿನಯ್ ಎಂಬಾತ ಕರೆ ಮಾಡಿ ಪರೋಕ್ಷವಾಗಿ ಡೀಲ್ ಬಗ್ಗೆ ಮಾತುಕತೆ ನಡೆಸಿದ್ದಾನೆ. ಅಷ್ಟೇ ಅಲ್ಲದೆ ನೇಮಕವಾದ ಅಭ್ಯರ್ಥಿಗಳು ಅಕ್ರಮ ಎಸಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಸಬೇಕೆಂದು ಕೋರಿ ಕೆಪಿಎಸ್‌ಸಿ ಅಭ್ಯರ್ಥಿ ವಿನ್ಸೆಂಟ್ ರೊಡ್ರಿಗ್ಸ್ ಎಂಬುವರು ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ.

ಲೆಕ್ಕಪರಿಶೋಧನೆ ಹಾಗೂ‌ ಲೆಕ್ಕಪತ್ರ ಇಲಾಖೆಯ ಸಹಾಯಕ ನಿಯಂತ್ರಕ ಹುದ್ದೆಗಳಿಗಾಗಿ 2020ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿತ್ತು.ಇದರಂತೆ ಪರೀಕ್ಷೆ 2022ರ ಏಪ್ರಿಲ್ 22 ರಂದು ಸಂದರ್ಶನಕ್ಕೂ ಕರೆದಿದ್ದರು. ಇದಕ್ಕೂ ಕೆಲ ದಿನಗಳ‌ ಹಿಂದೆ ಕೆಪಿಎಸ್‌ಸಿ ಸದಸ್ಯರ ಕಡೆಯವರು ಎಂದು ಕರೆ ಮಾಡಿದ್ದ ವಿನಯ್ ಎಂಬಾತ ನಿಯಂತ್ರಕ ಹುದ್ದೆಗಳಿಗೆ ಡೀಲ್‌ ನಡೆಯುತ್ತಿದ್ದು ನೀವು ಎಷ್ಟು ಹಣ ಹೊಂದಿಸುತ್ತೀರಿ? ಎಂದು ಕೇಳಿರುವುದಾಗಿ ವಿನ್ಸಂಟ್ ಆರೋಪಿಸಿದ್ದಾರೆ.

ನನಗೆ ಮಾತ್ರವಲ್ಲ, ಕೆಲ ಆಭ್ಯರ್ಥಿಗಳೊಂದಿಗೆ ಸಂಪರ್ಕ ಸಾಧಿಸಿರುವ ಗುಮಾನಿಯಿದೆ. ಸದ್ಯ 54 ಆಭ್ಯರ್ಥಿಗಳು ನೇಮಕಾತಿಯಾಗಿದ್ದಾರೆ. ಈ ಪೈಕಿ ಕೆಲ ಅಭ್ಯರ್ಥಿಗಳು ಅಕ್ರಮ ಎಸಗಿರುವ ಅನುಮಾನವಿದೆ. ಒಟ್ಟಾರೆ ಪರೀಕ್ಷಾ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ಭ್ರಷ್ಟಾಚಾರ ಕೇಳಿಬಂದಿದ್ದು ಈ ಸಂಬಂಧ ತನಿಖೆ ನಡೆಸುವಂತೆ ಪೊಲೀಸ್ ಕಮೀಷನರ್ ಕಮಲ್‌ಪಂತ್ ಗೆ ಅಭ್ಯರ್ಥಿ ವಿನ್ಸಂಟ್ ದೂರು ನೀಡಿದ್ದಾರೆ‌.

Edited By :
Kshetra Samachara

Kshetra Samachara

12/05/2022 06:22 pm

Cinque Terre

7.49 K

Cinque Terre

1

ಸಂಬಂಧಿತ ಸುದ್ದಿ