ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಪಿಎಸ್ ಐ ಮರುಪರೀಕ್ಷೆ ರದ್ದು ಮಾಡಿ"; ಅಭ್ಯರ್ಥಿಗಳಿಂದ ಧರಣಿ

ಬೆಂಗಳೂರು: ʼಎತ್ತಿಗೆ ಜ್ವರ ಬಂದ್ರೆ... ಎಮ್ಮೆಗೆ ಬರೆ!ʼ ಎಂಬಂತಾಗಿದೆ 545 ಪಿಎಸ್ಐ ಪರೀಕ್ಷೆ ಬರೆದ ಅಭ್ಯರ್ಥಿ ಗಳ ಸ್ಥಿತಿ. ‌ಯಾಕಂದ್ರೆ ಯಾರೋ ಮಾಡಿದ ತಪ್ಪಿಗೆ ಎಲ್ರಿಗೂ ಶಿಕ್ಷೆಯಾಗಿದೆ.

ಒಂದು ಕಡೆ ಅಕ್ರಮದ ಬೆನ್ನು ಹತ್ತಿರೊ ಸಿಐಡಿ, ದಿವ್ಯ ಹಾಗರಗಿ ಸೇರಿದಂತೆ 6 ಮಂದಿ ಆರೋಪಿಗಳನ್ನು ಬಂಧಿಸಿದೆ. ‌ಈ ಮಧ್ಯೆ ಸರ್ಕಾರ ಪರೀಕ್ಷೆಯನ್ನೇ ರದ್ದು ಮಾಡಿ ಮರು ಪರೀಕ್ಷೆಗೆ ಆದೇಶಿಸಿದೆ. ಇದನ್ನು ವಿರೋಧಿಸಿ ಪಿಎಸ್ ಐ ಕನಸು ಕಂಡಿದ್ದ ಅಭ್ಯರ್ಥಿಗಳು ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗೆ ಇಳಿದಿದ್ದಾರೆ.

"ಪಿಎಸ್ ಐ ಪರೀಕ್ಷೆಗಾಗಿ ವರ್ಷಾನುಗಟ್ಟಲೆ ಕಷ್ಟ ಪಟ್ಟಿದ್ದೇವೆ. ನಮ್ಮ ಜೊತೆಗೆ ನಮ್ಮ ಮನೆಯವರೂ ನಮ್ಮ ಬೆನ್ನಿಗೆ ನಿಂತಿದ್ದಾರೆ. ಸರ್ಕಾರ ದ ನೀತಿ ಸರಿ ಇಲ್ಲ. ನಮ್ಮ ಮನವಿಗೆ ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿ ಪ್ರತಿಕ್ರಿಯಿಸಬೇಕು" ಎಂದು ಪಟ್ಟು ಹಿಡಿದಿದ್ದಾರೆ.

ಇನ್ನು, ಯಾರು ತಪ್ಪು ಮಾಡಿದ್ದಾರೋ ಅವರನ್ನು ಹೊರಗಿಟ್ಟು ಉಳಿದವರಿಗೆ ನೇಮಕಾತಿ ಪತ್ರ ಕೊಡಬೇಕು. ಸಿಐಡಿ ತನಿಖಾ ವರದಿಯನ್ನೇ ನೀಡಿಲ್ಲ. ಅದಾಗ್ಲೇ ಈ ನಿರ್ಧಾರ ತಪ್ಪು. ಅವರು ವರದಿ ಕೊಡಲಿ. ನಮ್ಮನ್ನು ವಿಚಾರಣೆ ಮಾಡಿದ್ದಾರೆ. ದಿವ್ಯಾ ಹಾಗರಗಿ ಅರೆಸ್ಟ್ ಆಗಿ ಅರ್ಧ ಗಂಟೆಯೂ ವಿಚಾರಣೆ ಮಾಡದೆ ಸರ್ಕಾರ ಈ ನಿರ್ಧಾರ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅದೇನೆ ಇದ್ರೂ ಒಂದು ಕಡೆ ಅಕ್ರಮವಾಗಿ ಐಪಿಎಸ್ ಸ್ಟಾರ್ ಪಡೆದು ಮೆರೆಯೋ ಆಸೆ ಪಟ್ಟವರ ನಡುವೆ ಕಷ್ಟಪಟ್ಟು ಓದಿ ಪಿಎಸ್ ಐ ಕನಸು ಕಂಡಿದ್ದ ನೂರಾರು ಅಭ್ಯರ್ಥಿ ಗಳ ಭವಿಷ್ಯ ಬೀದಿಗೆ ಬಿದ್ದಂತಾಗಿದೆ.

* ಮರುಪರೀಕ್ಷೆ ನಿರ್ಧಾರ ಹಿಂಪಡೆಯುವಂತೆ ಆಗ್ರಹ

* ಅಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಲು ಒತ್ತಾಯ

* ಫ್ರೀಡಂ ಪಾರ್ಕ್ ಬಳಿ ಪೊಲೀಸ್ ಬಂದೋಬಸ್ತ್

* ಸುಮಾರು 60ಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಶ್ರೀನಿವಾಸ್ ಚಂದ್ರ, ಕ್ರೈಂ ಬ್ಯೂರೋ ʼಪಬ್ಲಿಕ್ ನೆಕ್ಸ್ಟ್ʼ

Edited By : Manjunath H D
PublicNext

PublicNext

30/04/2022 05:51 pm

Cinque Terre

41.97 K

Cinque Terre

0

ಸಂಬಂಧಿತ ಸುದ್ದಿ