ಬೆಂಗಳೂರು: ಪಿ.ಎಸ್ ಐ. ಆಯ್ಕೆಯ ಹಗರಣ ಮಾಸುವ ಮುನ್ನವೇ ಸರ್ಕಾರದ ಪವರ್ ಫುಲ್ ಇಲಾಖೆಯಿಂದ ಮತ್ತೊಂದು ಯಡವಟ್ಟು ಆಗಿಹೋಗಿದೆ. ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಕಳೆದ ಫೆಬ್ರುವರಿ ತಿಂಗಳಲ್ಲಿ ಸಹಾಯಕ ಇಂಜಿನಿಯರ್, ಕಿರಿಯ ಇಂಜಿನಿಯರ್, ಕಿರಿಯ ಸಹಾಯಕ ಸೇರಿದಂತೆ ಒಟ್ಟು 1492 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿತ್ತು.
ಸದರಿ ಹುದ್ದೆಗಳ ನೇಮಕ ಪ್ರಕ್ರಿಯೆಯ ಮೊದಲ ಹಂತ ಸ್ಪರ್ಧಾತ್ಮಕ ಪರೀಕ್ಷೆಗೆ ನಿನ್ನೆಯಷ್ಟೇ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ. ದಿನಾಂಕ 23-07-2022, 24-07-2022 ಹಾಗೂ 07-08-2022 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ಸಂಭಾವ್ಯ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಕೆಪಿಟಿಸಿಎಲ್‌ನ ಈ ಹುದ್ದೆಗಳ ಪರೀಕ್ಷೆಗೆ ಅಡ್ಮಿಟ್ ಕಾರ್ಡ್ ಬಿಡುಗಡೆ ಯಾವಾಗ ಎಂದು ಹಲವು ಅಭ್ಯರ್ಥಿಗಳು ಪ್ರಶ್ನೆ ಕೇಳಿದ್ದರು.ಅದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ https://cetonline.karnataka.gov.in/kea/ ಗೆ ಭೇಟಿ ನೀಡಿ.ಓಪನ್ ಆದ ಪೇಜ್‌ನಲ್ಲಿ ನೇಮಕಾತಿ >> ಕೆಪಿಟಿಸಿಎಲ್ 2022 ಎಂದಿರುವ ಆಯ್ಕೆ ಕ್ಲಿಕ್ ಮಾಡಲು ಸೂಚಿಸಲಾಗಿತ್ತು.
ನಂತರ ಓಪನ್ ಆಗುವ ಪೇಜ್‌ನಲ್ಲಿ ಪ್ರವೇಶ ಪತ್ರ ಡೌನ್‌ಲೋಡ್‌ಗೆ ಲಿಂಕ್ ನೀಡಲಾಗಿತ್ತು. ಅದನ್ನು ಕ್ಲಿಕ್ ಮಾಡಿದಾಗ ಕೆಇಎ'ಯ ಮತ್ತೊಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ಕ್ಲಿಕ್ ಮಾಡಿದರೆ ನಿಮ್ಮ ಪ್ರವೇಶ ಪತ್ರ ಪಡೆದುಕೊಳ್ಳಬಹುದು ಎಂದು ಮಾರ್ಗದರ್ಶನ ಮಾಡಲಾಗಿತ್ತು ಅದರಂತೆ ಅಭ್ಯರ್ಥಿಗಳು Download ಮಾಡಿಕೊಳ್ಳಲು ಹೋದಾಗ ಅನೇಕ ಅಭ್ಯರ್ಥಿಗಳ ಅಪ್ಲಿಕೇಶನ್ Reject ಆಗಿರುವುದು ಕಂಡು ಬಂದಿದೆ..
ಅದರ ಜಾಡು ಹಿಡಿದು ಹೊರಟಾಗ ಸರಿ ಸುಮಾರು 30 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳ ಅರ್ಜಿಯೇ Reject ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಹಾಗಾದ್ರೆ ನಿಜಕ್ಕೂ 30 ಸಾವಿರ ಇಂಜಿಯರ್ ಗಳಿಗೆ ಒಂದು ಅಪ್ಲಿಕೇಶನ್ ಭರ್ತಿ ಮಾಡೋಕೂ ಬರೋದಿಲ್ವಾ? ಅಪ್ಲಿಕೇಶನ್ ಭರ್ತಿಯೇ incomplete ಆದ ಮೇಲೆ ಸಂಬಂಧಿಸಿದ ಹಣ ಪಾವತಿಸಿಕೊಂಡಿದ್ದಾದರೂ ಏಕೆ ಎಂಬ ಯಕ್ಷ ಪ್ರಶ್ನೆ ಎಲ್ಲರನ್ನೂ ಕಾಡತೊಡಗಿದೆ..
ಹಾಗೆ ನೋಡಿದರೆ Reject ಆದ ಅಭ್ಯರ್ಥಿಗಳಿಂದ ಕಲೆಕ್ಟ್ ಮಾಡಿದ ಹಣವೇ ಸುಮಾರು ಎರಡು ಕೋಟಿಯಷ್ಟಾಗುತ್ತದೆ.. ! ತಿಂಗಳಾನುಗಟ್ಟಲೆ ಪರೀಕ್ಷೆಗಾಗಿ ಓದಿದ ಮಕ್ಕಳ ಭವಿಷ್ಯ ಮಂಕಾದಂತೆ ಆಗಿದೆ..
ಇದರ ಕುರಿತು ನೊಂದ ಅನೇಕ ಅಭ್ಯರ್ಥಿಗಳು ಪಬ್ಲಿಕ್ ನೆಕ್ಸ್ಟ್ ಜೊತೆ ತಮ್ಮ ನೋವು ಹಂಚಿಕೊಂಡಿದ್ದಾರೆ...
ಅದರ ಪುಲ್ ಡಿಟೇಲ್ಸ್ ಇಲ್ಲಿದೆ.. ಪ್ರವೀಣ್ ರಾವ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..
PublicNext
21/07/2022 06:31 pm