ಬೆಂಗಳೂರು: ಮಾಲ್‌ನಲ್ಲಿ ಸಿಕ್ಕ ಚಿನ್ನದ ಸರವನ್ನ ಮಹಿಳೆಗೆ ವಾಪಾಸ್ ಮಾಡಿ ಸಚಿವರ ಗನ್ ಮ್ಯಾನ್ ಮಾನವೀಯತೆ ತೋರಿದ್ದಾರೆ.ಸಚಿವ ಸುಧಾಕರ್ ಗನ್ ಮ್ಯಾನ್ ಆಗಿರುವ ಸಿ.ಎ.ಆರ್. ಕಾನ್ಸ್ಟೇಬಲ್ ಅಂಜನ್ ಕುಮಾರ್, ಜಿಟಿ ಮಾಲ್ ನಲ್ಲಿ ಸಿಕ್ಕ ಸರವನ್ನ ಮಹಿಳಿಗೆ ಹಿಂತಿರುಗಿಸಿದ್ದಾರೆ.
ಮಾಲ್‌ನಲ್ಲಿ ಶಾಪಿಂಗ್ ಹೋದಾಗ ಗನ್ ಮ್ಯಾನ್ ಅಂಜನ್‌ಗೆ ಚಿನ್ನದ ಸರ ಸಿಕ್ಕಿತ್ತು. ಸರ ಸಿಕ್ಕಿದ್ದರ ಬಗ್ಗೆ ಅಲ್ಲಿರುವ ಶಾಪ್ ಮಾಲೀಕರಿಗೆ ತಿಳಿಸಿದ್ರು. ಈ ವೇಳೆ ಮಹಿಳೆಯನ್ನು ಶಾಪ್‌ಗೆ ಕರೆಸುವಂತೆ ಹೇಳಿ ಶಾಪ್‌ನಲ್ಲೇ ಮಹಿಳೆಗೆ ಸರವನ್ನು ಹಿಂದುರುಗಿಸಿದ್ದಾರೆ.
ಚಿನ್ನದ ಸರ ಪಡೆದ ಅಶ್ವಿನಿ ಎನ್ನುವವರು ಕಾನ್ಸ್ಟೇಬಲ್ ಪ್ರಾಮಾಣಿಕತೆ ಮೆಚ್ಚಿ ಕಮಿಷನರ್‌ಗೆ ಪತ್ರ ಬರೆದಿದ್ದು,ಪೊಲೀಸ್ ಇಲಾಖೆಗೆ ಹಾಗೂ ಗನ್ ಮ್ಯಾನ್‌ಗೆ ಧನ್ಯವಾದ ತಿಳಿಸಿ ಪತ್ರ ಬರೆದಿದ್ದಾರೆ.ಇನ್ನೂ ಗನ್ ಮ್ಯಾನ್ ಅಂಜನ್ ಕಳೆದ ಏಳು ವರ್ಷಗಳಿಂದ ಸಚಿವ ಸುಧಾಕರ್‌ಗೆ ಗನ್ ಮ್ಯಾನ್ ಆಗಿದ್ದಾರೆ.
PublicNext
12/07/2022 01:39 pm