ಬೆಂಗಳೂರು: ಕನ್ನಡ ಚಿತ್ರರಂಗದಲ್ಲೂ ಹಿಂದಿ ಚಿತ್ರರಂಗದಲ್ಲೂ ಹಿಂದಿ ರಾಷ್ಟ್ರೀಯ ಭಾಷೇನಾ ? ಅನ್ನೋ ವಿಷಯ ಈಗ
ದೊಡ್ಡ ಮಟ್ಟದಲ್ಲಿ ಭಾರೀ ಚರ್ಚೆಯಾಗ್ತಿದೆ. ಟ್ವಿಟರ್ ನಲ್ಲಂತೂ ಹಿಂದಿ ವಾರ್ ಬಲು ಜೋರಾಗಿಯೇ ನಡೆಯುತ್ತಿದೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಸುದೀಪ್ ಅವರ ಮಾತಿಗೆ ಚಂದನವನ ಬೆನ್ನಿಗೆ ನಿಂತಿದೆ. ಇನ್ನೂಇದನ್ನ ಖಂಡಿಸಿ ಕೆರಳಿದ ಕರವೇ ರಕ್ಷಣ ವೇದಿಕೆಯಿಂದ ಮೈಸೂರ್ ಬ್ಯಾಂಕ್ ಸರ್ಕಲ್ ನಲ್ಲಿ ಪ್ರೊಟೆಸ್ಟ್ ಮಾಡಿದ್ದು, ಅಜಯ್ ದೇವಗನ್ ಗೆ ಏನಾದ್ರು ಬುದ್ದಿ ಭ್ರಮಣೆಯಾಗಿದ್ಯಾ, ಸರ್ಕಾರ ಏನ್ ಮಾಡ್ತಿದೆ ಅಂತಲೇ ಪ್ರವೀಣ್ ಶೆಟ್ಟಿ ಗುಡುಗಿದ್ದಾರೆ.
ಸುದೀಪ್ ಮತ್ತು ಅಜಯ್ ದೇವಗನ್ ಭಾಷಾ ವಾರ್, ರಾಜಕಾರಣಕ್ಕೂ ಎಂಟ್ರಿಕೊಟ್ಟಿದ್ದು, ಸಿದ್ದರಾಮಯ್ಯನವ್ರು ಈ ಕುರಿತು ಮಾತನಾಡಿದ್ದು,ಮ ಹಿಂದಿ ಭಾಷೆ ನಮ್ಮ ರಾಷ್ಟ್ರ ಭಾಷೆ ಅಲ್ಲ, ಇತಿಹಾಸದ ಪುಟಗಳನ್ನ ಒಮ್ಮೆ ತೆಗೆದು ನೋಡಿ ಎಂದು ಅಜಯ್ ದೇವಗನ್‌ಗೆ ಸಕ್ಕತ್ ಟಾಂಟ್ ಕೊಟ್ಟಿದ್ದಾರೆ. ಈಗಾಗಲೇ ಕನ್ನಡ ಪರ ಸಂಘಟನೆಗಳಿಗೆ ಸುದೀಪ್ ಬೆಂಬಲೊಕ್ಕೆ ನಿಂತಿವೆ. ಅಲ್ಲಿಗೆ ಈ ಭಾಷಾ ವಾರ್ ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಕಾದು ನೋಡಬೇಕಿದೆ.
PublicNext
28/04/2022 06:00 pm