ಬೆಂಗಳೂರು ದಕ್ಷಿಣ : ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಸಿಂಗಸಂದ್ರ ವಾರ್ಡಿನ ಪರಪ್ಪನ ಅಗ್ರಹಾರದ ಮುಖ್ಯ ರಸ್ತೆಗಳ ರಸ್ತೆ ಡಾಂಬರೀಕರಣಕ್ಕೆ ಇಂದು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ ಕೃಷ್ಣಪ್ಪ ಚಾಲನೆ ನೀಡಿದರು
ಇನ್ನು ಈ ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕೆ ಶ್ರಮಿಸಿದ ಶಾಸಕರಿಗೆ ಊರಿನ ಗ್ರಾಮಸ್ಥರು ಕೃತಜ್ಞತೆಯನ್ನು ಸಲ್ಲಿಸಿದರು
ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಶಾಂತ ವಿ ಬಾಬು, ಮುಖಂಡರಾದ ಬಾಬು ಶ್ರೀನಿವಾಸ್,ಬಿಜೆಪಿ ಮಂಡಲದ ಅಧ್ಯಕ್ಷರಾದ ಕೇಶವ್ ರಾಜ್, ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.
Kshetra Samachara
01/06/2022 07:38 pm