ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದಿಂದ ಬೊಮ್ಮಸಂದ್ರದ ಸರ್ಕಾರಿ ಮಾದರಿ ಪ್ರಾಥಮಿಕ ಪಾಠ ಶಾಲೆಯಲ್ಲಿ ಕವಿ ದಿನ ಕವಿತೆಗಳ ಉತ್ಸವ ಎಂಬ ಕಾರ್ಯಕ್ರಮವನ್ನು ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಪುರಸಭೆಯ ಅಧ್ಯಕ್ಷ ಗೋಪಾಲ್, ಕವಿಯ ಆಲೋಚನಾ ಶಕ್ತಿ ವಿಭಿನ್ನವಾಗಿರುತ್ತದೆ. ಎಲ್ಲಾ ವಿಷಯಗಳನ್ನು ಲೋಕಭಿರಾಮವಾಗಿ ವಿಚಾರಿಸುತ್ತ ಮಾತನಾಡುವಂತಹ ಗುಣವುಳ್ಳವನಾಗಿದ್ದಾನೆ ಎಂದು ಬಣ್ಣಿಸಿದರು.
ಎಲ್ಲಾ ಭಾಷೆಗಳಿಗಿಂತ ಕನ್ನಡ ಭಾಷೆಯನ್ನು ಸುಲಭವಾಗಿ ಕಲಿಯಬಹುದು. ಕನ್ನಡ ನಾಡಿನಲ್ಲಿ ವಾಸವಾಗಿರುವ ಹೊರ ರಾಜ್ಯದ ಎಲ್ಲಾ ಭಾಷಿಕರು ಕನ್ನಡ ಕಲಿಯುವ ಆಸಕ್ತಿಯನ್ನು ತೋರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಪರ ಹಿರಿಯ ಹೋರಾಟಗಾರರಾದ ಬಿಎಂಆರ್ ಕಿತ್ತಗಾನಹಳ್ಳಿ ಶಿವಪ್ಪ ಹರೀಶ್ ತಿಲಕ್ ಧಾರ್ಮಿಕ ಗುರುಗಳಾದ ಶ್ಯಾಮ್ ಶಾಲೆಯ ಮುಖ್ಯೋಪಾಧ್ಯಾಯರಾದ ಲೋಕೇಶ್ ಕವಿಗಳಾದ ಆನೇಕಲ್ ಭೈರಪ್ಪ ಮಹೇಶ್ ಊಗಿನಹಳ್ಳಿ ವಿಶಾಲಾ ಆರಾಧ್ಯ ಭಾಗಿಯಾಗಿದ್ದರು.
Kshetra Samachara
01/08/2022 05:50 pm