ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಸಿಎಂ ಶ್ರೀ ಜೆ.ಹೆಚ್.ಪಟೇಲ್ ಜನ್ಮದಿನಾಚರಣೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಬೆಂಗಳೂರು: ವಿ.ಸೋಮಣ್ಣ ಪ್ರತಿಷ್ಠಾನದ ವತಿಯಿಂದ ಮಾಜಿ ಮುಖ್ಯಮಂತ್ರಿಗಳು, ಸಮಾಜವಾದಿ ಶ್ರೀ ಜೆ.ಹೆಚ್.ಪಟೇಲ್ ರವರ ಜನ್ಮದಿನಾಚರಣೆ ಮತ್ತು ಪ್ರಶಸ್ತಿ ಪ್ರದಾನ-2022 ಸಮಾರಂಭವನ್ನು ಬೆಂಗಳೂರಿನ ಭಾರತೀಯ ವಿದ್ಯಾ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮಾನ್ಯ ವಸತಿ ಸಚಿವರಾದ ಶ್ರೀ ವಿ.ಸೋಮಣ್ಣರವರು ಜೆ.ಹೆಚ್.ಪಟೇಲ್ ರವರು ಮಾಡಿದ ಸೇವೆ ಮತ್ತು ಅವರ ಮಾನವೀಯತೆ, ಸಹನೆ, ತಾಳ್ಮೆ ದೊಡ್ಡತನವನ್ನು ಇಂದಿನ ರಾಜಕಾರಣಿಗಳು ಅರಿತುಕೊಳ್ಳಬೇಕು. ನನ್ನ ರಾಜಕೀಯ ಜೀವನಕ್ಕೆ ಜೆ.ಹೆಚ್.ಪಟೇಲ್ ರವರು ಸಹಕಾರ ನೀಡಿದರು. ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ, ಶ್ರೀ ಶಿವಕುಮಾರ ಸ್ವಾಮೀಜಿರವರ ಆಶೀರ್ವಾದದ ಪುಣ್ಯಫಲದಿಂದ ಮೊದಲ ಬಾರಿಗೆ ಶಾಸಕನಾಗಿ ಗೆದ್ದು ಬಂದೆ. ಜೆ.ಹೆಚ್.ಪಟೇಲ್ ರವರ ಹೃದಯ ಶ್ರೀಮಂತಿಕೆಗೆ ಪಟೇಲರೆ ಸಾಟಿ. ಬೆಂಗಳೂರು ನಗರ ಅಭಿವೃದ್ದಿಗೆ ಜೆ.ಹೆಚ್.ಪಟೇಲ್ ಸಾಕಷ್ಟು ಕೊಡುಗೆ ನೀಡಿದ್ದರು.

ರಾಜಕಾರಣ ನಿಂತ ನೀರಲ್ಲ, ಉತ್ತಮ ರಾಜಕಾರಣಿಯ ಜೊತೆಯಲ್ಲಿ ಒಡನಾಟ ಮಾಡು ಎಂದು ಜೆ.ಹೆಚ್.ಪಟೇಲರು ನನಗೆ ಸಲಹೆ ನೀಡಿದ್ದರು. ಉತ್ತಮ ಆಡಳಿತ ನಿರ್ವಹಣೆ, ಯುವ ರಾಜಕಾರಣಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದರು. ಸರಳತೆ, ನೇರ ನುಡಿಯ ಜೆ.ಹೆಚ್.ಪಟೇಲ್ ರವರು ಜನಸಾಮಾನ್ಯರ ಮುಖ್ಯಮಂತ್ರಿ ಆಗಿದ್ದರು ಎಂದರು.

ಸಚಿವರಾದ ಗೋವಿಂದ ಕಾರಜೋಳರವರು ಮಾತನಾಡಿ ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ರವರು ಪ್ರಕೃತಿಯ ಆರಾಧಕರು, ಶರಣ ಸಂಸ್ಕೃತಿಯನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಶ್ರೀಮಂತರಾಗಿ ಹುಟ್ಟಿದರು ಬಡಜನರ ಬಗ್ಗೆ ಅಪಾರ ಪ್ರೀತಿ ಇಟ್ಟಿದ್ದರು. ದಿ.ರಾಮಕೃಷ್ಣ ಹೆಗಡೆ, ಎಸ್.ಆರ್.ಬೊಮ್ಮಾಯಿ, ಜೆ.ಹೆಚ್.ಪಟೇಲ್ ರವರು ಉತ್ತರ ಕರ್ನಾಟಕ ಜನರಿಗೆ ಹೆಚ್ಚಿನ ರಾಜಕೀಯ ಅವಕಾಶ ನೀಡಿದರು. ಸಮಾಜದ ಬಗ್ಗೆ ಕಳಕಳಿ, ದೀನ-ದಲಿತರ ಬಗ್ಗೆ ಗೌರವ ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಸಮಾಜಸೇವೆ ಎಂದರೆ ಹಣಗಳಿಸುವ ಉದ್ಯಮ ಆಗಬಾರದು ಎಂದು ಜೆ.ಹೆಚ್.ಪಟೇಲ್ ರವರು ಹೇಳುತ್ತಿದ್ದರು ಎಂದರು.

ಜಯಪ್ರಕಾಶ್ ಹೆಗಡೆರವರು ಮಾತನಾಡಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ರವರ ಆಡಳಿತದಲ್ಲಿ ಸ್ನೇಹಮಯ ವಾತವರಣದಲ್ಲಿ ವಿಧಾನಸಭೆಯ ಕಲಾಪ ನಡೆಯುತ್ತಿತ್ತು. ಜೆ.ಹೆಚ್.ಪಟೇಲ್ ರವರು ನೇರ, ನುಡಿಯ ದಿಟ್ಟ ಹೋರಾಟಗಾರರಾಗಿದ್ದರು. ಅವರ ಚಿಂತನೆ, ಆದರ್ಶ ಇಂದಿಗೂ ಶಾಶ್ವತವಾಗಿದೆ ಮತ್ತು ವಿರೋಧ ಪಕ್ಷದವರ ಸ್ನೇಹ, ಪ್ರೀತಿಗೆ ಪಾತ್ರರಾಗಿದ್ದರು ಎಂದು ಹೇಳಿದರು.

Edited By : PublicNext Desk
Kshetra Samachara

Kshetra Samachara

01/10/2022 09:47 pm

Cinque Terre

664

Cinque Terre

0