ಬೊಮ್ಮನಹಳ್ಳಿ: ಪ್ರತಿಷ್ಠಿತ ಗೋಕಲ್ ದಾಸ್ ಕಂಪನಿಯಲ್ಲಿ 90 ಜನ ಕಾರ್ಮಿಕರನ್ನ ಏಕಾಏಕಿ ಹೊರಹಾಕಿದ್ದಾರೆ. ಕಾರ್ಮಿಕರಿಗೆ 6 ತಿಂಗಳಿಂದ ಸಂಬಳ ಕೊಟ್ಟಿಲ್ಲ, ಈ ಕಂಪನಿಯನ್ನ ನಂಬಿ ಲಕ್ಷಾಂತರ ಕಾರ್ಮಿಕರು ಸಾಲ ಮಾಡಿಕೊಂಡಿದ್ದಾರೆ. ಕಂಪನಿ ಸಂಬಳ ಕೊಡದೇ, ಊಟ ಮಾಡುವುದಕ್ಕೂ ಬಿಡದೇ, ಕಾರ್ಮಿಕರ ಕೈಯಲ್ಲಿ ಕೆಲಸ ಮಾಡಿಸುತ್ತೆ.
ಅಷ್ಟೇ ಅಲ್ಲದೇ ಕಾರ್ಮಿಕರಿಗೆ ಮಾನಸಿಕವಾಗಿ ಹಿಂಸೆ ,ಕಿರುಕುಳ ಕೊಡ್ತಾರೆ. ಇಷ್ಟ ಇದ್ದರೆ ಬನ್ನಿ , ಇಲ್ಲ ಅಂದರೆ ಬೇಡ ಅಂತಿದ್ದಾರೆ. ಹೀಗೆ ಕಾರ್ಮಿಕರು ಕಂಪನಿಯ ಮೇಲೆ ಸಾಲು ಸಾಲು ಆರೋಪ ಮಾಡ್ತಿದ್ದಾರೆ. ನೊಂದ ಕಾರ್ಮಿಕರು ಬೀದಿಗಳಿದ್ದು ಕಂಪನಿಯ ವಿರುದ್ಧ ಧರಣಿ ನಡೆಸ್ತಿದ್ದಾರೆ.
ಆದ್ರೆ ಕಾರ್ಮಿಕರು ಎಷ್ಟೇ ಧರಣಿ ನಡೆಸಿದ್ರು ಗೋಕಲ್ ದಾಸ್ ಕಂಪನಿ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ನೊಂದ ಕಾರ್ಮಿಕರು ಆಕ್ರೋಶ ಹೊರಹಾಕ್ತಿದ್ದಾರೆ. ಕಂಪನಿಯಿಂದ ಸುಮಾರು 90 ಕುಟುಂಬಗಳು ಈಗ ಬೀದಿ ಪಾಲಾಗಿದೆ. ಆದ್ರೆ ಈಗ ಕಂಪನಿ ಬೇರೆ ಸಿಬ್ಬಂದಿಗಳನ್ನ ಕೆಲಸಕ್ಕೆ ತೆಗೆದುಕೊಂಡಿದ್ದಾರೆ.ಹೀಗಾಗಿ ಬೀದಿಗೆ ಬಿದಂತಹ ಕಾರ್ಮಿಕರು ಅಸಾಮಾಧಾನಗೊಂಡಿದ್ದಾರೆ.
Kshetra Samachara
13/09/2022 02:21 pm