ಬೆಂಗಳೂರು: ಕರ್ನಾಟಕ ರಾಜ್ಯದ ಕೆ.ಎಫ್.ಸಿ.ಎಸ್.ಸಿ. ಗೋಡನ್ ಗಳಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಮತ್ತು ಆನ್ಲೋಡಿಂಗ್ ಕಾರ್ಮಿಕರಿಗೆ ಕಾನೂನಿನ ಪ್ರಕಾರ ನೀಡಬೇಕಿರುವ ಸವಲತ್ತನ್ನು, ಕಾಯಿದೆಗಳ ಉಲ್ಲಂಘನೆ ಹಾಗೂ ಆದೇಶಗಳನ್ನು ಉಲ್ಲಂಘನೆ ಮಾಡಿರುವ ಜಿಲ್ಲಾ ಮಟ್ಟದ ಜಂಟಿ ನಿರ್ದೇಶಕರು, ಉಪ ನಿರ್ದೆಶಕರು, ಜಿಲ್ಲಾ ವ್ಯವಸ್ಥಾಪಕರು ಹಾಗೂ ಗೋಡನ್ ವ್ಯವಸ್ಥಾಪಕರಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು ಎಂದು ಕೆ.ಎಫ್.ಸಿ.ಎಸ್.ಸಿ ಲೋಡಿಂಗ್ ಮತ್ತು ಆನ್ಲೋಡಿಂಗ್ ಕಾರ್ಮಿಕ ಸಂಘಟನೆಗಳು ಆಗ್ರಹಸಿದವು.
ಸೋಮವಾರ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಫ್.ಸಿ.ಎಸ್.ಸಿ ಲೋಡಿಂಗ್ ಅಂಡ್ ಆನ್ಲೋಡಿಂಗ್ ಕಾರ್ಮಿಕ ಸಂಘಟನೆ ಅಧ್ಯಕ್ಷ ಜಿ.ಆರ್. ಶಿವಶಂಕರ್, ಗುತ್ತಿಗೆ ಕಾರ್ಮಿಕರು ಮತ್ತು ಆಹಾರ ಮತ್ತು ನಾಗರಿಕ ಇಲಾಖೆ ಒಟ್ಟಿಗೆ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಲೋಡಿಂಗ್ ಆನ್ಲೋಡಿಂಗ್ ಕಾರ್ಮಿಕರಿಗೆ ಕಾನೂನಿನ ಪ್ರಕಾರ ಸಿಗಬೇಕಾದ ಎಲ್ಲ ಸವಲತ್ತನ್ನು ನೀಡಬೇಕು. ಈ ಕಾರ್ಮಿಕರಿಗೆ ಸರ್ಕಾರ ನಿಗದಿ ಪಡಿಸಿದ ಹಣವನ್ನು ಸರಿಯಾಗಿ ನೀಡುತ್ತಿಲ್ಲ. ಅದರೊಂದಿಗೆ ಪಿಂಚಣಿ ವ್ಯವಸ್ತೆಯನ್ನು ಇವರಿಗೆ ನೀಡಿಲ್ಲ. ಇದೆಲ್ಲ ಅವರ ಜೀವನಕ್ಕೆ ಅಭಾದ್ರತೆ ಸೃಷ್ಟಿಸುತ್ತದೆ. ಇದರತ್ತ ಸರ್ಕಾರ ಗಮನ ಹರಿಸಬೇಕು.ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿಕೊಂಡರು.
ನಾವು ಇರಿಸಿರುವ ಈ ಬೇಡಿಕೆಗಳನ್ನು ಅನೇಕ ಸಮಯದಿಂದ ಕೇಳುತ್ತಾ ಬಂದಿದ್ದು, ಅದರತ್ತ ಸರ್ಕಾರ ಗಮನ ನೀಡಿಲ್ಲ. ನಗರದಲ್ಲಿ 2800 ಜನ ಇದೆ ಕೆಲಸ ನಂಬಿಕೊಡು ಬದುಗುತ್ತಿದ್ದರೆ. ಇದರ ಕುರಿತು ಸಿಎಂ ಗೆ ಕೂಡ ಪತ್ರ ಬರೆಯಲಾಗಿದ್ದು, ಅರವು ಪರಿಶೀಲಿಸುವಂತೆ ಹೇಳಿದ್ದಾರೆ. ಆದರೆ ಅಧಿಕಾರಿಗಳು ಅದನ್ನು ನಿರ್ಲಕ್ಷಿಸಿದ್ದಾರೆ. ಇನ್ನು 15 ದಿನಗಳಲ್ಲಿ ಕ್ರಮ ತೆಗೆದುಕೊಳ್ಳದಿದ್ದರೆ ಜು. 20ರಿಂದ ಎಲ್ಲಾ ಗೂಡಾನ್ ಗಳ ಕೆಲಸ ಮಾಡುವುದನ್ನು ನಿಲ್ಲಿಸುವ ಬೃಹತ್ ಪ್ರತಿಭಟನೆ ಮಾಡಲಿದ್ದೇವೆ ಎಂದು ಹೇಳಿದರು.
Kshetra Samachara
04/07/2022 08:31 pm