ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೊಡ್ಡಬಳ್ಳಾಪುರ: 'ಅಕ್ರಮ ಮದ್ಯಮಾರಾಟಕ್ಕೆ ಬೇಸತ್ತ ಮಹಿಳೆಯರು; DC ಮುಂದೇನೆ ಹಾಕಿದರು ಕಣ್ಣೀರು !

ದೊಡ್ಡಬಳ್ಳಾಪುರ: ಈ ಬಾರಿಯ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ತಾಲೂಕಿನ ಮಡೇಶ್ವರ ಗ್ರಾಮದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಮಹಿಳೆಯರು ಕಣ್ಣೀರು ಹಾಕಿದ್ದಾರೆ. 70 ಕುಟುಂಬಗಳಿರುವ ಈ ಮಾಡೇಶ್ವರ ಗ್ರಾಮದಲ್ಲಿ 10 ಕಡೆ ಅಕ್ರಮ ಮದ್ಯ ಮಾಡಲಾಗುತ್ತಿದೆ.

ಜನರ ಸಮಸ್ಯೆಗಳನ್ನ ಜನರ ಮನೆ ಬಾಗಿಲಲ್ಲೇ ಬಗೆಹರಿಸುವ ಕಾರ್ಯಕ್ರಮವೇ ಈ "ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ" ಕಾರ್ಯಕ್ರಮ ಆಗಿದೆ. ಪ್ರತಿ ತಿಂಗಳು ನಡೆಯುವ ಕಾರ್ಯಕ್ರಮವನ್ನು ಈ ಬಾರಿ ದೊಡ್ಡಬಳ್ಳಾಪುರ ತಾಲೂಕಿನ ಮಾಡೇಶ್ವರ ಗ್ರಾಮದಲ್ಲಿ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಒಟ್ಟು 294 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಕೆಲ ಅರ್ಜಿಗಳಿಗೆ ಸ್ಥಳದಲ್ಲೇ ಪರಿಹಾರ ಸೂಚಿಸಲಾಗಿದೆ. ಗ್ರಾಮದಲ್ಲಿನ ಕೋಳಿ ಫಾರಂ ಮತ್ತು ನಾಯಿಗಳ ಫಾರಂ ತೆರವು ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದರು. ಸಮಸ್ಯೆಗಳಿಗೆ ಸ್ಪಂದಿಸಿದ ತಹಶೀಲ್ದಾರ್, ಸ್ಥಳಕ್ಕೆ ಭೇಟಿ ಬಗೆಹರಿಸುವ ಭರವಸೆಯನ್ನ ನೀಡಿದ್ದಾರೆ.

ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಮಹಿಳೆಯರು ಅಧಿಕಾರಿಗಳ ಮುಂದೆ ಕಣ್ಣಿರು ಹಾಕಿದರು. 70 ಕುಟುಂಬಗಳಿರುವ ಗ್ರಾಮದಲ್ಲಿ 10 ಕಡೆ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಕುಡಿತ ವ್ಯಸನದಿಂದ ಮನೆಗಳಲ್ಲಿ ನಿತ್ಯ ಜಗಳವಾಗುತ್ತಿದೆ. ಅಕ್ರಮ ಮದ್ಯ ಮಾರಾಟದ ಬಗ್ಗೆ ಪ್ರಶ್ನೆ ಮಾಡಿದರೇ, ಮದ್ಯ ಮಾರಾಟಗಾರರು ಧಮ್ಕಿ ಹಾಕುತ್ತಾರೆ. ಕುಡಿತದಿಂದ ಈಗಾಗಲೇ ಹಲವು ಸಂಸಾರ ಬೀದಿಗೆ ಬಿದ್ದಿವೆ. ಗ್ರಾಮದಲ್ಲಿನ ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಮಹಿಳೆಯರು ಅಧಿಕಾರಿಗಳ ಮುಂದೆ ಕಣ್ಣೀರು ಹಾಕಿದರು.

ತಾಲೂಕಿನ ಪ್ರತಿ ಗ್ರಾಮದಲ್ಲೂ ಅಕ್ರಮ ಮದ್ಯ ಮಾರಾಟದ ದಂಧೆ ನಡೆಯುತ್ತಿದೆ. ಅಕ್ರಮ ಮದ್ಯ ಮಾರಾಟಕ್ಕೆ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬೆಂಬಲವೂ ಇದೆ. ಇದರಿಂದ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಅಸಾಧ್ಯವಾಗಿದೆ.ಈ ಮೂಲಕ ಹೃದಯವೇ ಇಲ್ಲದ ಅಧಿಕಾರಿಗಳಿಂದ ಗ್ರಾಮೀಣ ಜನರ ಬದುಕು ಬೀದಿಗೆ ಬಂದಿದೆ.

Edited By : Shivu K
Kshetra Samachara

Kshetra Samachara

19/04/2022 12:50 pm

Cinque Terre

1.37 K

Cinque Terre

0