ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಎಂದರೆ ಕೂಡಲೇ ನೆನಪಿಗೆ ಬರುವುದು ಕಳೆದ ವರ್ಷ ಸಂಭವಿಸಿದ ಆ ದುರಂತ! ಈ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಈ ದುರ್ಘಟನೆ ನಡೆದು 6 ತಿಂಗಳು ಕಳೆದು ಹೋಗಿದ್ದರೂ ಸ್ಥಳದಲ್ಲಿ ಸಂಚಾರಿ ಪೊಲೀಸರ ತಪಾಸಣೆ ಇನ್ನೂ ನಡೆಯುತ್ತಿದೆ.
ಇನ್ನು, ಸ್ಥಳದಲ್ಲಿ ಪೊಲೀಸರು ವಾಹನಗಳ ಸ್ಪೀಡ್ ಗೆ ಕಡಿವಾಣ ಹಾಕಲು ಎಲಿವೇಟೆಡ್ ಎಕ್ಸ್‌ಪ್ರೆಸ್ ನಲ್ಲಿ ವಾಹನ ತಪಾಸಣೆ ಮಾಡ್ತಿದ್ದಾರೆ. ಆದರೆ, ಅಲ್ಲಿ ಜಾಗ ಇಕ್ಕಟ್ಟಾಗಿರುವುದರಿಂದ ಪೊಲೀಸರಿಗೆ ಕೂಡ ಸೇಫ್ಟಿ ಇಲ್ಲ! ಏಕೆಂದರೆ ಮೊನ್ನೆ ಪೊಲೀಸರು ವಾಹನ ತಪಾಸಣೆ ಮಾಡುತ್ತಿರುವಾಗ ವಾಹನಗಳನ್ನು ನಿಲ್ಲಿಸಲು ಹೋಗಿ ಟೆಂಪೋ ಲಾರಿಯೊಂದು ಸೀದಾ ಪೊಲೀಸರ ಮೇಲೆಯೇ ಏರಿ ಬಂದಿತ್ತು! ಆದರೆ, ಅದೃಷ್ಟವಶಾತ್ ಟ್ರಾಫಿಕ್ ಪೊಲೀಸರು ಪ್ರಾಣಾಪಾಯದಿಂದ ಪಾರಾಗಿದ್ದರು.
PublicNext
07/04/2022 11:38 am