ಬೆಂಗಳೂರು: ನಮ್ಮ ಮೆಟ್ರೋ ಫೇಸ್-2 ಕಾಮಗಾರಿ ವೇಳೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಹುದೊಡ್ಡ ಮಷೀನ್ ಸುಮಾರು 40 ಅಡಿ ಎತ್ತರದಿಂದ ಕೆಳಗೆ ಬಿದ್ದಿದೆ. ಮೆಟ್ರೋ ಸೆಗ್ಮೆಂಟ್ಸ್ ಜೋಡಿಸುವ ಮಷೀನ್ ಅರ್ಧಕ್ಕೆ ಕಟ್ ಆಗಿದೆ. ಅದೃಷ್ಟವಶಾತ್ ಕರ್ತವ್ಯನಿರತ ನೂರಾರು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಂಗಳೂರಿನ ಸಿಲ್ಕ್ ಬೋರ್ಡ್- ಕೆ.ಆರ್.ಪುರಂ ಮಾರ್ಗವಾಗಿ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇಂದು ಬೆಳಿಗ್ಗೆ 6.30ರ ಸುಮಾರಿಗೆ ಸಿಲ್ಕ್ ಬೋರ್ಡ್ ಬಳಿ ಕಾಮಗಾರಿ ವೇಳೆ ಈ ಘಟನೆ ಸಂಭವಿಸಿದೆ. ಕ್ರೇನ್ ಮಷೀನ್ ಅರ್ಧಕ್ಕೆ ಕಟ್ ಆಗಿದೆ. ಮಷೀನ್ ಮೇಲೆತ್ತಲು ಕಾರ್ಮಿಕರು ಹರಸಾಹಸ ಪಡುತ್ತಿದ್ದಾರೆ. ಘಟನೆ ನಡೆದು 6 ಗಂಟೆ ಕಳೆದರೂ ಇದುವರೆಗೂ ಸ್ಥಳಕ್ಕೆ ಯಾವುದೇ ಮೆಟ್ರೋ ಅಧಿಕಾರಿಯೂ ಭೇಟಿ ನೀಡಿಲ್ಲ.
Kshetra Samachara
24/10/2021 12:56 pm