ಬೆಂಗಳೂರು: ಭಗವದ್ಗೀತೆ ಶ್ರೇಷ್ಠ ಧರ್ಮಗ್ರಂಥ ಎಂದು ನಾವು ಭಾವಿಸಿದ್ದೇವೆ. ಅದರಂತೆಯೇ ಭಗವದ್ಗೀತೆಯಷ್ಟೇ ನಮ್ಮ ಸಂವಿಧಾನವೂ ಕೂಡ ಶ್ರೇಷ್ಠ ಗ್ರಂಥವಾಗಿದ್ದು, ಅದನ್ನು ಅಪ್ಪಿಕೊಳ್ಳಬೇಕು ಎಂದು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕರೆ ನೀಡಿದರು.
ನಗರದಲ್ಲಿಂದು ಕುಮಾರಕೃಪಾದ ಗಾಂಧಿ ಭವನದಲ್ಲಿ ವಿಂಡೈಸ್ ಪ್ರೈ.ಲಿ ಕಾನ್ಷಿ ಫೌಂಡೇಶನ್ ಮತ್ತು ಸಾಕ್ಯ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಭಾರತದ ಸಂವಿಧಾನ ಮತ್ತು ಕಾನೂನು ವ್ಯವಸ್ಥೆಗಳ ಬಗ್ಗೆ ಅರಿವು ಮತ್ತು ಜಾಗೃತಿ ಮಹಾಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹಲವು ವೈಶಿಷ್ಟ್ಯತೆಯನ್ನು ಹೊಂದಿರುವ ನಮ್ಮ ಭಾರತೀಯ ಸಂವಿಧಾನ ನಮ್ಮೆಲ್ಲಾ ನಾಗರೀಕರನ್ನು ಸಶಕ್ತಗೊಳಿಸಿದೆ. ಸರ್ವರಿಗೂ ಸಮಾನತೆಯ ಅವಕಾಶ ನೀಡಿದೆ. ಪ್ರತಿಯೊಬ್ಬರಿಗೂ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳನ್ನು ನೀಡಿದೆ.
ಇಂತಹ ಸಂವಿಧಾನದ ಮಹತ್ವದ ಬಗ್ಗೆ ದೇಶದ ಎಲ್ಲಾ ನಾಗರೀಕರಲ್ಲಿ ಅರಿವು ಮೂಡಿಸುವುದು, ಸಂವಿಧಾನದ ಬಗೆಗೆ ಗೌರವ ಹೆಮ್ಮೆ ಉಂಟು ಮಾಡಿಸುವುದರ ಜೊತೆಗೆ ಬಿ.ಆರ್. ಅಂಬೇಡ್ಕರ್‌ರವರ ಸಾಧನೆಯ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಸಂವಿಧಾನ ದಿನಾಚರಣೆಯ ಮೂಲ ಉದ್ದೇಶವಾಗಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.
Kshetra Samachara
10/10/2022 02:14 pm