ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾಡಹಬ್ಬ ದಸರಾ ಪ್ರಯುಕ್ತ ಗ್ರಾಮ ದೇವತೆಗಳ ಪಲ್ಲಕ್ಕಿ ಉತ್ಸವ

ಬೆಂಗಳೂರು: ವಿಜಯದಶಮಿ ಪ್ರಯುಕ್ತವಾಗಿ ಮಹದೇವಪುರ ಕ್ಷೇತ್ರದ ವೈಟ್ ಫೀಲ್ಡ್ ಸುತ್ತಮುತ್ತಲಿನ ವಿವಿಧ ಗ್ರಾಮಗಳ 50ಕ್ಕೂ ಹೆಚ್ಚು ಗ್ರಾಮ ದೇವತೆಗಳ ಪಲ್ಲಕ್ಕಿಗಳು ಅಂಬೇಡ್ಕರ್ ನಗರದ ದಸರಾ ಮೈದಾನದಲ್ಲಿ ಸೇರಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಪ್ರತಿವರ್ಷದಂತೆ ಈ ವರ್ಷವು ನವರಾತ್ರಿ ಉತ್ಸವದ ಅಂಗವಾಗಿ ಒಂಭತ್ತು ದಿನಗಳ ವಿಶೇಷ ಪೂಜೆಯ ನಂತರ ಕಾಡುಗುಡಿ, ಚನ್ನಸಂದ್ರ, ಪಟ್ಟಂದೂರು ಅಗ್ರಹಾರ, ನಲ್ಲೂರಹಳ್ಳಿ, ರಾಮಗೊಂಡನಹಳ್ಳಿ, ದಿನ್ನೂರು, ಗ್ರಾಮದೇವತೆಗಳಾದ ಮುನೇಶ್ವರ, ಮಾರಮ್ಮ, ಸಪಲಮ್ಮ, ಯಲ್ಲಮ್ಮ ಗಂಗಮ್ಮ ದೊಡ್ಡಮ್ಮ ಸೇರಿದಂತೆ ವಿವಿಧ ಗ್ರಾಮದೇವತೆಗಳನ್ನು ಗ್ರಾಮಗಳಿಂದ ಮೆರವಣಿಗೆ ಮಾಡಿ ನಂತರ ಪಲ್ಲಕ್ಕಿಯನ್ನು ಅಂಬೇಡ್ಕರ್ ನಗರದ ದಸರಾ ಮೈದಾನದಲ್ಲಿ ಸೇರಿಸಿ ಎಲ್ಲಾ ಗ್ರಾಮದ ಜನರು ಸೇರಿ ಒಂದೇ ಬಾರಿಗೆ ಎಲ್ಲಾ ದೇವರುಗಳಿಗೆ ಪೂಜೆಯನ್ನು ಸಲ್ಲಿಸಿದರು.

ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ದಸರಾ ಉತ್ಸವದಲ್ಲಿ ಭಾಗವಹಿಸಿ ಉತ್ಸವ ಮೂರ್ತಿಗಳಿಗೆ ಹಾಗೂ ಬನ್ನಿ ಮರಕ್ಕೆ ಪೂಜೆ

ಸಲ್ಲಿಸಿದರು. ಈ ಉತ್ಸವದಲ್ಲಿ ಕೋಲಾರ ಸಂಸದ ಎಸ್.ಮುನಿಸ್ವಾಮಿ, ಕ್ಷೇತ್ರ ಅಧ್ಯಕ್ಷ ಮನೋಹರರೆಡ್ಡಿ, ಗ್ರಾಮಾಂತರ ಅದ್ಯಕ್ಷ ನಟರಾಜ್, ಮುಖಂಡರಾದ ಮಾರಪ್ಪ, ರಾಜೇಶ್, ಚನ್ನಸಂದ್ರ ಚಂದ್ರಶೇಖರ್ ಇದ್ದರು ಭಾಗವಹಿಸಿದ್ದರು‌.

Edited By : PublicNext Desk
Kshetra Samachara

Kshetra Samachara

08/10/2022 08:33 pm

Cinque Terre

820

Cinque Terre

0

ಸಂಬಂಧಿತ ಸುದ್ದಿ