ಬೆಂಗಳೂರು : ನಾಡಹಬ್ಬ ದಸರಾ ಅಂಗವಾಗಿ ಅಂಗಡಿ, ವಾಹನಗಳು, ಕಚೇರಿಗಳೂ ಸೇರಿದಂತೆ ಎಲ್ಲಾ ಪೂಜೆಗಳಿಗೂ ಬಲು ಬೇಡಿಕೆಯಾಗಿರುವ ಬೂದುಗುಂಬಳ ಬೆಲೆ ಗಗನಕ್ಕೇರಿಯಾಗಿದೆ.
ನಗರದ ಕೆಆರ್ ಮಾರುಕಟ್ಟೆ, ಮಡಿವಾಳ, ಮಲ್ಲೇಶ್ವರ, ವಿಜಯನಗರ, ಗಾಂಧಿ ಬಜಾರ್, ಜಯನಗರ ಸೇರಿದಂತೆ ಅನೇಕ ಮಾರುಕಟ್ಟೆಗಳಲ್ಲಿ ಹೂವು, ಹಣ್ಣು, ಬೂದುಗುಂಬಳಕಾಯಿ, ನಿಂಬೆ ಹಾಗೂ ಪೂಜಾ ಸಾಮಗ್ರಿಗಳಿಂದ ತುಂಬಿದೆ. ತಮಿಳುನಾಡಿನಿಂದ ಬರುವ ಮಲ್ಲಿಗೆ, ಮಾರಿಗೋಲ್ಡ್, ಸೇವಂತಿಗೆ, ಐಸ್‌ಬರ್ನ್ ಸೇವಂತಿಗೆ ದರ ಸ್ವಲ್ಪ ಏರಿಕೆಯಾಗಿದೆ.
ಈ ಬಾರಿ ನಿರಂತರ ಮಳೆಯಿಂದಾಗಿ ಎಲ್ಲೆಡೆ ಬೂದು ಗುಂಬಳ ಬೆಳೆ ಹಾಳಾಗಿದ್ದು, ಚಿಲ್ಲರೆ ದರದಲ್ಲಿ ಒಂದು ಕೆ.ಜಿ. 40 ರೂ. ತಲುಪಿದೆ. ಸಗಟು ದರದಲ್ಲಿ ಕೆ.ಜಿ.ಗೆ 25-30 ರೂ. ದರ ಇದೆ.
ವಾಹನಗಳು, ಮಳಿಗೆಗಳ ಪೂಜೆಗೆ ಅಗ್ರಗಣ್ಯವಾದ ಹೂಗಳಿವೆ. ಹೀಗಾಗಿ, ಕೆ.ಆರ್. ಮಾರುಕಟ್ಟೆಯಲ್ಲಿ ಗುಣಮಟ್ಟದ ಆಧಾರದ ಮೇಲೆ ಸೇವಂತಿ ಹೂವು ಕೆ.ಜಿ.ಗೆ 100 ರಿಂದ 200 ರೂ.ಇದೆ. ಚೆಂಡು ಹೂವು ಕೆ.ಜಿ.ಗೆ 60 ರೂ. ತಲುಪಿದೆ. ಈ ಹೂವುಗಳು ಹೆಚ್ಚಾಗಿ ಗೌರಿಬಿದನೂರು, ಮೈಸೂರು ಮತ್ತಿತರ ಭಾಗಗಳಿಂದ ಬರುತ್ತಿವೆ. ಮಲ್ಲಿಗೆ ಮೊಗ್ಗು ಕೆ.ಜಿ.ಗೆ 7000 ರೂ. ಇವೆ. ಈ ಸೇವಂತಿಗೆ ಹೂವು ಕೆ.ಜಿ.ಗೆ 200-300 ರೂ. ಇದೆ.
Kshetra Samachara
03/10/2022 11:06 pm