ಬೆಂಗಳೂರು: ಆಯುಧ ಪೂಜೆಯನ್ನು ವಿಶೇಷವಾಗಿ ಜನರು ಆಚರಿಸಲು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಜೆ.ಪಿ ನಗರದ ಪುಟ್ಟೇನಹಳ್ಳಿಯ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ಟ್ರಸ್ಟ್ ವತಿಯಿಂದ ಭಾನುವಾರ 5 ಸಾವಿರ ಬೂದುಕುಂಬಳಕಾಯಿಗಳನ್ನ 10 ನಾಣ್ಯಗಳ ಸಮೇತ ಪೂಜಾ ಸಾಮಗ್ರಿಗಳನ್ನು ಪ್ರಸಾದದ ರೂಪದಲ್ಲಿ ಭಕ್ತರಿಗೆ ಉಚಿತವಾಗಿ ವಿತರಿಸಲಾಯಿತು.
ದಸರಾ ರಾಜ್ಯದ ನಾಡಹಬ್ಬ. ಆಯುಧ ಪೂಜೆಯಂದು ನಮ್ಮ ದೇವಸ್ಥಾನದ ಸುತ್ತ ಮತ್ತಲಿನ ಎಲ್ಲಾ ಮನೆಗಳಲ್ಲಿ ವಿಜ್ರಂಭಣೆಯಿಂದ ಆಯುಧ ಪೂಜೆಯನ್ನು ನೆರವೇರಿಸಲಿ ಎನ್ನುವ ಉದ್ದೇಶಧಿಂದ ನಮ್ಮ ದೇವಸ್ಥಾನದ ವತಿಯಿಂದ 5 ಸಾವಿರ ಜನರಿಗೆ ಹರಿಶಿಣ, ಕುಂಕುಮ, 2 ನಿಂಬೇ ಹಣ್ಣು, ಊದುಕಡ್ಡಿ, ಕರ್ಪೂರ, 10 ಕಾಯಿನ್ ಹೊಂದಿರುವ ಪೂಜಾ ಸಾಮಗ್ರಿಗಳನ್ನು ವಿತರಿಸಿದ್ದೇವೆ.
ಹಬ್ಬಗಳನ್ನು ವಿಶೇಷವಾಗಿ ಆಚರಿಸಲು ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸತ್ಯಗಣಪತಿ ದೇವಸ್ಥಾನ ಹಲವಾರು ವಿನೂತನ ಆಚರಣೆಗಳನ್ನ ಅಳವಡಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತದೆ.
Kshetra Samachara
02/10/2022 05:49 pm